Sunday, May 19, 2024
Homeತಾಜಾ ಸುದ್ದಿಪಟಾಕಿ ಮಾರಾಟಕ್ಕೆ ಸರ್ಕಾರದಿಂದ ಮಾರ್ಗಸೂಚಿ: ಲೈಸೆನ್ಸ್ ಇದ್ದರಷ್ಟೇ ಪಟಾಕಿ ಮಾರಾಟಕ್ಕೆ ಅನುಮತಿ

ಪಟಾಕಿ ಮಾರಾಟಕ್ಕೆ ಸರ್ಕಾರದಿಂದ ಮಾರ್ಗಸೂಚಿ: ಲೈಸೆನ್ಸ್ ಇದ್ದರಷ್ಟೇ ಪಟಾಕಿ ಮಾರಾಟಕ್ಕೆ ಅನುಮತಿ

spot_img
- Advertisement -
- Advertisement -

ಬೆಂಗಳೂರು : ದೀಪಾವಳಿ ಹಬ್ಬಗಳನ್ನು ಕೊರೋನಾ ಸೋಂಕಿನ ಸಂದರ್ಭದಲ್ಲಿ ಸರಳ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ಕಡ್ಡಾಯವಾಗಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಇಲಾಖೆಯಿಂದ ಪರವಾನಿಗೆ ಪಡೆದ ಮಾರಾಟಗಾರರಿಗೆ ಮಾತ್ರ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮಳಿಗೆಗಳನ್ನು ನವೆಂಬರ್ 1 ರಿಂದ 17 ರವರೆಗೆ ಮಾತ್ರ ತೆರೆಯತಕ್ಕದ್ದು ಎಂದು ಹೇಳಿದೆ.

ಇನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹೀಗಿದೆ

*ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು

*ಪಟಾಕಿಯನ್ನು ಸಂಬಂಧ ಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತವಾಗಿ ಪರವಾನಗಿಯನ್ನು ಪಡುದು, ಮಾರಾಟ ಮಾಡಬೇಕು.

*ಪಟಾಕಿ ಮಾರಾಟದ ಮಳಿಗೆಗಳನ್ನು ದಿನಾಂಕ 01-11-2020ರಿಂದ 17-11-2020ರವರೆಗೆ ಮಾತ್ರ ತೆರೆದಿರಬೇಕು.

*ಪಟಾಕಿ ಮಾರಾಟಕ್ಕಾಗಿ ಪರವಾನಿಗೆ ಪದದಂತವರು ಇಲಾಖೆ, ಪ್ರಾಧಿಕಾರದಿಂದ ಸೂಚಿಸಿದಂತ ಸ್ಥಳದಲ್ಲಿಯೇ ತಾತ್ಕಾಲಿಕ ಅಂಗಡಿಯನ್ನು ತೆರೆಯಬೇಕು.

*ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಮಾತ್ರ ಪಟಾಕಿ ಮಳಿಗೆಗಳನ್ನು ತೆರೆಯಲು ಸಂಬಂಧಿಸಿದ ಇಲಾಖೆ, ಪ್ರಾಧಿಕಾರಗಳು ಅನುಮತಿ ನೀಡಬೇಕು.

*ಒಂದು ಪಟಾಕಿ ಅಂಗಡಿಯಿಂದ ಮತ್ತೊಂದು ಮಳಿಗೆಗೆ 6 ಮೀಟರ್ ಅಂತರವಿರಬೇಕು

*ಪ್ರತಿದಿನ ಮಾರಾಟ ಮಳಿಗೆಯ ಸುತ್ತಾ ಮುತ್ತ ಸ್ಯಾನಿಟೈಸೇಷನ್ ಮಾಡಬೇಕು.

*ಪಟಾಕಿ ಖರೀದಿಸುವವರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಬೇಕು

*ಪಟಾಕಿ ಖರೀದಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು

ಈ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸದ್ರೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಸಿಗಲಿದೆ

- Advertisement -
spot_img

Latest News

error: Content is protected !!