Tuesday, October 13, 2026
Homeಕರಾವಳಿಧರ್ಮಸ್ಥಳ : ಪಾದಯಾತ್ರೆ ಬರುವ ಭಕ್ತರಿಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ವಿಶೇಷ ಸೇವೆ

ಧರ್ಮಸ್ಥಳ : ಪಾದಯಾತ್ರೆ ಬರುವ ಭಕ್ತರಿಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ವಿಶೇಷ ಸೇವೆ

- Advertisement -
- Advertisement -

ಬೆಳ್ತಂಗಡಿ : ಶಿವರಾತ್ರಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಾರ್ಮಾಡಿ ಮೂಲಕ ಪಾದಯಾತ್ರೆ ಮಾಡಿಕೊಂಡು ಬರುತ್ತಿದ್ದು ಇವರಿಗೆ ಹಲವು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಊಟ , ಹಣ್ಣು ಹಂಪಲು ನೀಡುತ್ತಿದ್ದಾರೆ. ಈ ಭಾರಿ ವಿಶೇಷವಾಗಿ ಬೆಳ್ತಂಗಡಿ ಸಂಚಾರಿ ಪೊಲೀಸರು ಕೂಡ ಉಚಿತವಾಗಿ ಹಣ್ಣು, ಹಂಪಲು ಹಾಗೂ ಮಜ್ಜಿಗೆ ನೀಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಾದಯಾತ್ರೆ ಬರುತ್ತಿರುವವರಿಗೆ ಪಿಕಪ್ ಮೂಲಕ ಕಲ್ಲಂಗಡಿ ಜ್ಯೂಸ್ ಮತ್ತು ಮಜ್ಜಿಗೆ ಗಳನ್ನು ರೆಡಿ ಮಾಡಿಕೊಂಡು ತಂದು ರಸ್ತೆಯ ಪಕ್ಕದಲ್ಲಿ ಟೇಪಲ್ ಹಾಕಿ ಭಕ್ತರಿಗೆ ನೀಡುವ ಮೂಲಕ ಸೇವೆ ಮಾಡುತ್ತಿರುವುದು ಭಕ್ತರ ಸೇವೆಯ ವಿಶೇಷವಾಗಿದೆ.

- Advertisement -

Latest News

error: Content is protected !!