Monday, June 8, 2026
Homeಕರಾವಳಿಉಡುಪಿಉಡುಪಿ: ರಸ್ತೆ ಬದಿ ಕಸದ ರಾಶಿಯಲ್ಲಿ ಕಾರ್ಮಿಕನ ಮೃತದೇಹ ಎಸೆದು ಹೋದ ಪ್ರಕರಣ: ಎಸ್ಪಿ ಸ್ಪಷ್ಟನೆ

ಉಡುಪಿ: ರಸ್ತೆ ಬದಿ ಕಸದ ರಾಶಿಯಲ್ಲಿ ಕಾರ್ಮಿಕನ ಮೃತದೇಹ ಎಸೆದು ಹೋದ ಪ್ರಕರಣ: ಎಸ್ಪಿ ಸ್ಪಷ್ಟನೆ

- Advertisement -
- Advertisement -

ಉಡುಪಿ: ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿಯ ಕಸದ ಕೊಂಪೆಯಲ್ಲಿ ಎಸೆದು ಹೋದ ಪ್ರಕರಣ ಸಂಬಂಧ ಎಸ್ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.

ಮೃತ ವ್ಯಕ್ತಿ ಹನುಮಂತ ಕುಡಿದು ಬಂದು ಟೆಂಪೋದಲ್ಲಿ ಮಲಗಿದ್ದ. ಎಷ್ಟೊತ್ತಾದರೂ ಏಳದ ಕಾರಣ ಹನುಮಂತನ ಸ್ನೇಹಿತರು ಆತ ವ್ಯಾಪಾರ ಮಾಡುವ ಸ್ಥಳಕ್ಕೆ ಬಂದು ಇಳಿಸಿ ಹೋಗಿದ್ದಾರೆ. ಅದಾದ ಮೇಲೆ ಯಾವುದೋ ಕಾರಣದಿಂದ ಹನುಮಂತ ಸಾವನ್ನಪ್ಪಿದ್ದಾನೆ. ಅಲ್ಲದೇ ಹನುಮಂತನ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ. ಆತನ ಸ್ನೇಹಿತರನ್ನು ವಿಚಾರಣೆ ನಡೆಸಿದ್ದೇವೆ. ಇವರ ನಡುವೆ ಯಾವುದೇ ಗಲಾಟೆ ನಡೆದಿಲ್ಲ ಎಂದು ತಿಳಿದುಬಂದಿದೆ.. ವೈದ್ಯಕೀಯ ಪರೀಕ್ಷೆಯಲ್ಲಿ ಹನುಮಂತನ ಸಾವಿಗೆ ಕಾರಣ ಏನೆಂಬುದು ತಿಳಿಯಲಿದೆ ಎಂದಿದ್ದಾರೆ.

- Advertisement -

Latest News

error: Content is protected !!