Wednesday, April 16, 2025
Homeಮನರಂಜನೆಕೊನೆಗೂ ಗುಡ್ ನ್ಯೂಸ್ ಕೊಟ್ಟೇ ಬಿಟ್ರು ಸ್ಟಾರ್ ನಿರೂಪಕಿ ಅನುಶ್ರೀ..

ಕೊನೆಗೂ ಗುಡ್ ನ್ಯೂಸ್ ಕೊಟ್ಟೇ ಬಿಟ್ರು ಸ್ಟಾರ್ ನಿರೂಪಕಿ ಅನುಶ್ರೀ..

spot_img
- Advertisement -
- Advertisement -

ಕಿರುತೆರೆಯಲ್ಲಿ ತಮ್ಮ ನಿರೂಪಣೆಯ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ನಟಿ ಅಂದ್ರೆ ಅದು ಅನುಶ್ರೀ. ಅವರು ತಮ್ಮ ಅಭಿನಯಕ್ಕಿಂತ ಹೆಚ್ಚಾಗಿ ನಿರೂಪಣೆಯ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದವರು. ಇದೇ ಅನುಶ್ರೀಯವರನ್ನು ಅವರ ಅಭಿಮಾನಿಗಳು ಒಂದೆರಡು ತಿಂಗಳುಗಳಿಂದ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ನಿಮಗೆಲ್ಲಾ ಗೊತ್ತೇ ಇದೆ. ಅದು ಏನಪ್ಪಾ ಅಂದ್ರೆ ಅವರ ನಿರೂಪಣೆಯ ಸರಿಗಮಪ ರಿಯಾಲಿಟಿ ಶೋ ಪ್ರಸಾರವಾಗದೇ ಇರೋದು.

ಇದೀಗ ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಅನುಶ್ರೀ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೊರೊನಾದಿಂದಾಗಿ ಎಲ್ಲಾ ಧಾರಾವಾಹಿ. ರಿಯಾಲಿಟಿ ಶೋಗಳ ಚಿತ್ರೀಕರಣ ನಿಂತು ಹೋಗಿತ್ತು. ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿ ಹೊಸ ಎಪಿಸೋಡ್ ಗಳು ಪ್ರಸಾರ ಆರಂಭಿಸಿದ್ದರೂ ರಿಯಾಲಿಟಿ ಶೋಗಳು ಮಾತ್ರ ಪ್ರಸಾರವಾಗುತ್ತಿರಲಿಲ್ಲ. ಅದರ ಚಿತ್ರೀಕರಣಗಳು ಕೂಡ ನಡೆಯುತ್ತಿರಲಿಲ್ಲ. ಹಾಗಾಗಿ ಜನ ರಿಯಾಲಿಟಿ ಶೋಗಳನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದರು. ಅದರಲ್ಲೂ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅನುಶ್ರೀ ನಿರೂಪಣೆಯ ಸರಿಗಮಪ ರಿಯಾಲಿಟಿ ಶೋನ ಜನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಇಂತಹ ಮಂದಿಗೆ ಇದೀಗ ಅನುಶ್ರೀ ಸೂಪರ್ ಸುದ್ದಿ ಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ, ಅತೀ ಶೀಘ್ರದಲ್ಲಿ ತಮ್ಮ ನಿರೂಪಣೆಯ ಸರಿಗಮಪ ಕಾರ್ಯಕ್ರಮ ಪ್ರಸಾರವನ್ನು ಆರಂಭಿಸಲಿದೆ ಅಂತಾ ಅನುಶ್ರೀ ಹೇಳಿದ್ದಾರೆ. ರಿಯಾಲಿಟಿ ಶೋಗಳ ಚಿತ್ರೀಕರಣರಕ್ಕೆ ಸರ್ಕಾರ ಅನುಮತಿ ನೀಡಿರೋದರಿಂದ ಶೀಘ್ರದಲ್ಲೇ ಹೊಸ ಎಪಿಸೋಡ್ ಗಳು ಪ್ರಸಾರವಾಗಲಿದೆ ಎಂದು ಅನುಶ್ರೀ ಹೇಳಿದ್ದಾರೆ.

- Advertisement -
spot_img

Latest News

error: Content is protected !!