- Advertisement -
- Advertisement -
ನವದೆಹಲಿ: ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಭಾರತೀಯ ಜೀವ ವಿಮಾ ನಿಗಮದ(ಎಲ್.ಐ.ಸಿ.) ಪಾಲಿಸಿದಾರರಿಗೆ ನೆಮ್ಮದಿ ಸುದ್ದಿ ಇಲ್ಲಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಪಾವತಿಸಬೇಕಿದ್ದ ಪ್ರೀಮಿಯಂಗಳನ್ನು ಪಾವತಿಸಲು ಒಂದು ತಿಂಗಳು ಕಾಲಾವಕಾಶ ವಿಸ್ತರಿಸಲಾಗಿದೆ. ಫೆಬ್ರವರಿಯಲ್ಲಿ ಪಾವತಿಸಬೇಕಿದ್ದ ಪ್ರೀಮಿಯಂಗಳಿಗೆ ಏಪ್ರಿಲ್ 15 ರವರೆಗೆ ಕಾಲಾವಕಾಶವಿದೆ.
ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಎಲ್‌ಐಸಿ ಪಾಲಿಸಿದಾರರಿಗೆ ಪ್ರೀಮಿಯಂ ಕಟ್ಟಲು ಕಾಲಾವಕಾಶ ವಿಸ್ತರಿಸಲಾಗಿದೆ. ಅದೇ ರೀತಿ ಅಂಚೆ ಇಲಾಖೆ ವತಿಯಿಂದ ವಿಮೆ ಪಾವತಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.
- Advertisement -