ಧರ್ಮಸ್ಥಳ: ಕೋವಿಡ್ -19 ಪರಿಣಾಮಗಳಿಂದ ತೊಂದರೆಗೆ ಒಳಗಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ) ಧರ್ಮಸ್ಥಳ ಇದರ ಸದಸ್ಯರ ದೈನಂದಿನ ಅಗತ್ಯಗಳನ್ನು ಪೂರೈಸಲು ಅನುಕೂಲವಾಗುವಂತೆ ಲಾಕ್ ಡೌನ್ ಅವಧಿ ಮುಗಿಯುವ ವರೆಗೆ ರೈತ ಸದಸ್ಯರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಧರ್ಮಸ್ಥಳ ಕೇಂದ್ರ ಕಚೇರಿಯಲ್ಲಿ ಪ್ರತಿ ದಿನ 20 ಎ ದರ್ಜೆ ಸದಸ್ಯರಿಂದ ಕಿಲೋವೊಂದಕ್ಕೆ 175 ರೂಪಾಯಿಯಂತೆ 100 ಕೆಜಿ ಅಡಿಕೆಯನ್ನು ಅಡಮಾನ ಸಾಲ ನೀಡಲಾಗುವುದು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಬೇಡಿಕೆಯನ್ನು ಅನುಸರಿಸಿ ಸಂಘದ ಆಡಳಿತ ಮಂಡಳಿ, ಸಣ್ಣ ಪ್ರಮಾಣದಲ್ಲಿ ಸಂಘದ ಮುಖ್ಯ ಕಛೇರಿಯ ಗೋದಾಮು ನಲ್ಲಿ ದಾಸ್ತಾನು ಇರಿಸಿ ಷರತ್ತುಗಳನ್ವಯ ಅಡಿಕೆಗೆ ಒಬ್ಬ ಸದಸ್ಯರಿಂದ ಗರಿಷ್ಟ 100 ಕೆ.ಜಿ. ಮೀರದಂತೆ ಅಡಮಾನ ಸಾಲ ನೀಡಲಾಗುವುದು. ಸದಸ್ಯರು ಹಿಂದಿನ ದಿನ ಸಂಘವನ್ನು ಸಂಪರ್ಕಿಸಿ ( 08256-277142 ) ಟೋಕನ್ ನಂಬ್ರ ಪಡೆದು ಮರು ದಿನ ಸಂಘದ ಗೋದಾಮು ನಲ್ಲಿ ದಾಸ್ತಾನು ಇರಿಸಿದಲ್ಲಿ ಸಾಲ ನೀಡಲಾಗುವುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ತಿಳಿಸಿದ್ದಾರೆ.
ಧರ್ಮಸ್ಥಳ: ರೈತರಿಗೆ ನೆರವಾಗಲು ಅಡಿಕೆಯ ಮೇಲೆ ಅಡಮಾನ ಸಾಲ
- Advertisement -
- Advertisement -
- Advertisement -