Wednesday, June 3, 2026
Homeಕರಾವಳಿಗುದದ್ವಾರದಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮ ಸಾಗಾಟ ಯತ್ನ: ವ್ಯಕ್ತಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು

ಗುದದ್ವಾರದಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮ ಸಾಗಾಟ ಯತ್ನ: ವ್ಯಕ್ತಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು

- Advertisement -
- Advertisement -

ಮಂಗಳೂರು: ಗುದದ್ವಾರದಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ 44.2 ಲಕ್ಷ ಮೌಲ್ಯದ 870 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.


ಬಂಧಿತ ಆರೋಪಿಯನ್ನು ಮಡಿಕೇರಿಯ ಉಬೇದ್ ಬಲ್ಯಾತ್ ಅಜೀಜ್ ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದು, ಪ್ರಯಾಣಿಕರ ಪರಿಶೀಲನೆ ವೇಳೆ ಈ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಆರೋಪಿ 870 ಗ್ರಾಂ ಚಿನ್ನವನ್ನು ತನ್ನ ಗುದದ್ವಾರದಲ್ಲಿ ಪೆಸ್ಟ್ ರೂಪದಲ್ಲಿ ಕರಗಿಸಿ ಅಡಗಿಸಿಟ್ಟುಕೊಂಡು ಸಾಗಾಟಕ್ಕೆ ಯತ್ನಿಸಿದ್ದಾನೆ.

- Advertisement -

Latest News

error: Content is protected !!