Saturday, June 6, 2026
Homeಕರಾವಳಿಅಂಡರ್ ವೇರ್ ನಲ್ಲಿಟ್ಟು ಚಿನ್ನ ಸಾಗಾಟ: ಮಂಗಳೂರಿನಲ್ಲಿ ಇಬ್ಬರು ಅಂದರ್

ಅಂಡರ್ ವೇರ್ ನಲ್ಲಿಟ್ಟು ಚಿನ್ನ ಸಾಗಾಟ: ಮಂಗಳೂರಿನಲ್ಲಿ ಇಬ್ಬರು ಅಂದರ್

- Advertisement -
- Advertisement -

ಮಂಗಳೂರು: ಅಂಡರ್ ವೇರ್ ನಲ್ಲಿ 2.15 ಕೆಜಿ ಚಿನ್ನವನ್ನು ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಬಂಧಿತರನ್ನು ಕಾಸರಗೋಡಿನ ಫೈಜಲ್ ತೊಟ್ಟಿ ಮೆಲ್ಪರಂಬ ಹಾಗೂ ಮೊಹಮ್ಮದ್‌ ಶೋಹೈಬ್‌ ಮುಗು ಎಂದು ಗುರುತಿಸಲಾಗಿದೆ.

 ಆರೋಪಿಗಳು ಶಾರ್ಜಾ ದಿಂದ ಏರ್‌ ಇಂಡಿಯಾ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಸಂಶಯದ ಮೇಲೆ ಇಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ 24 ಕ್ಯಾರೆಟ್‌ನ 2.154 ಕೆ.ಜಿ. ಚಿನ್ನವನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ಅಂದಾಜು 1.09 ಕೋಟಿಯಾಗಿದೆ. ಕಸ್ಟಮ್ಸ್‌ ಉಪ ಆಯುಕ್ತ ಪ್ರವೀಣ ಕಂಡಿ, ಸೂಪರಿಂಟೆಂಡೆಂಟ್‌ ಶ್ರೀಕಾಂತ್‌ ಕೆ., ಶುಭೆಂದು ರಂಜನ್‌ ಬೆಹರೆ, ನವೀನ್‌ಕುಮಾರ್‌ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ತಂಡವನ್ನು ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನಸ್ ಜಾರ್ಜ್ ಅಭಿನಂದಿಸಿದ್ದಾರೆ

- Advertisement -

Latest News

error: Content is protected !!