Friday, June 5, 2026
Homeಕರಾವಳಿಪುತ್ತೂರಿನಲ್ಲಿ ಅನ್ಯ ಕೋಮಿನ ಯುವಕರೊಂದಿಗಿದ್ದ ಯುವತಿ: ಯುವಕರು ಹಾಗೂ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರಿನಲ್ಲಿ ಅನ್ಯ ಕೋಮಿನ ಯುವಕರೊಂದಿಗಿದ್ದ ಯುವತಿ: ಯುವಕರು ಹಾಗೂ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಪುತ್ತೂರು: ಅನ್ಯ ಕೋಮಿನ ಯುವಕರೊಂದಿಗೆ ಕೆಫೆಯೊಂದರಲ್ಲಿದ್ದ ಹಿಂದೂ ಯುವತಿಯೊಬ್ಬಳು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಅರುಣಾ ಚಿತ್ರ ಮಂದಿರದ ಬಳಿಯ ಕಾಫಿ ಆಂಡ್ ಕ್ರೀಮ್ಸ್ ಕೆಫೆಗೆ ಅನ್ಯಕೋಮಿನ ಇಬ್ಬರು ಯುವಕರ ಜೊತೆ ಬಂದಿದ್ದ ಯುವತಿ ಸಿಕ್ಕಿ ಬಿದ್ದಿದ್ದಾಳೆ. ಈ ಹಿಂದೆಯೂ ಇದೇ ಕೆಫೆಯಲ್ಲಿ ಪಾರ್ಟಿ ನೆಪದಲ್ಲಿ ನೆರೆದಿದ್ದ ಅನ್ಯಕೋಮಿನ ಯುವಕನನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದರು.

ಪುತ್ತೂರು ಪೋಲಿಸರು ಸ್ಥಳಕ್ಕಾಗಮಿಸಿ ಯುವಕರು ಹಾಗೂ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!