- Advertisement -
- Advertisement -
ಮಂಗಳೂರು: ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬನಿಂದ ಅರ್ಧ ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದ 3 ದಿನಗಳ ಹಿಂದೆ ವಿಮಾನದಲ್ಲಿ ಬಂದ ವ್ಯಕ್ತಿಯು ಅನುಮಾನಾಸ್ಪದವಾಗಿ ಹೊರಗೆ ಹೋಗುವಾಗ ಆತನನ್ನು ಸುಂಕ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಆತನ ಬಳಿ ಅರ್ಧ ಕೆಜಿ ಚಿನ್ನದ ಗಟ್ಟಿ ಸಿಕ್ಕಿದೆ. ಇದರ ಮೌಲ್ಯ 25 ಲಕ್ಷಕ್ಕೂ ಹೆಚ್ಚು ಎಂದು ತಿಳಿಸಲಾಗಿದೆ. ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ
- Advertisement -