Friday, June 5, 2026
Homeಕರಾವಳಿಪುತ್ತೂರು: ಸ್ಕೂಟರ್‌ ಸ್ಕಿಡ್‌ ಆಗಿ ಸವಾರ ಸ್ಥಳದಲ್ಲೆ ಸಾವು

ಪುತ್ತೂರು: ಸ್ಕೂಟರ್‌ ಸ್ಕಿಡ್‌ ಆಗಿ ಸವಾರ ಸ್ಥಳದಲ್ಲೆ ಸಾವು

- Advertisement -
- Advertisement -

ಪುತ್ತೂರು: ನಗರದ ಹೊರವಲಯದ ಬನ್ನೂರು ಶಾಲಾ ಬಳಿ ಸ್ಕೂಟರ್‌ವೊಂದು ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಮೃತರನ್ನು ಬನ್ನೂರು ನೆಕ್ಕಿಲ ನಿವಾಸಿ ನಿಶಾಂತ್(28‌ ವ.) ಮೃತ ದುರ್ದೈವಿ. ನಿಶಾಂತ್ ಬೂಂದ್‌ ಕುಡಿಯುವ ನೀರಿನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇವರು ರಾತ್ರಿ ವೇಳೆ ಟಿವಿಎಸ್‌ ಸ್ಕೂಟರ್‌ ನಲ್ಲಿ ಮನೆ ಕಡೆ ಬರುತ್ತಿದ್ದ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅದೇ ದಾರಿಯಾಗಿ ತಡ ರಾತ್ರಿ ವ್ಯಕ್ತಿಯೊಬ್ಬರು ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಸ್ಕೂಟರ್‌ ಬಿದ್ದಿದ್ದು, ಸ್ಕೂಟರ್‌ ಸವಾರ ಪಕ್ಕದ ಚರಂಡಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿತ್ತು.

ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ರಾತ್ರಿಯೇ ಭೆಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮೃತರು ತಾಯಿ ಚಂದ್ರಾವತಿ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!