Thursday, June 25, 2026
Homeಕರಾವಳಿಮಂಗಳೂರುಮಂಗಳೂರು ;ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು; ಕಳವು ಮಾಡಿದ ಬ್ಯಾಗೇಜ್ ನೌಕರರ ಬಂಧನ...

ಮಂಗಳೂರು ;ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು; ಕಳವು ಮಾಡಿದ ಬ್ಯಾಗೇಜ್ ನೌಕರರ ಬಂಧನ ಮತ್ತು ಚಿನ್ನಾಭರಣ ಹಾಗೂ ನಗದು ವಶ

- Advertisement -
- Advertisement -

 ಮಂಗಳೂರು ;ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳ್ಳತನ ಮಾಡಿದ ಬ್ಯಾಗೇಜ್ ನೌಕರರನ್ನು ಬಂಧಿಸಲಾಗಿದ್ದು, ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿಗಳಾದ  ಸದಾನಂದ, ರಾಜೇಶ್ ಮತ್ತು ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್, ಮೂಡುಪೆರಾರದ ನಿವಾಸಿ ರವಿರಾಜ್ ಬಂಧಿತರು.

ಪ್ರಕರಣದ ವಿವರ:

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು 30-08-2025 ರಂದು ಬೆಳಿಗ್ಗೆ ಬೆಂಗಳೂರಿನಿಂದ AIR INDIA EXPRESS ವಿಮಾನದಲ್ಲಿ ಪ್ರಯಾಣ ಮಾಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ನಿಲ್ದಾಣದ ಬ್ಯಾಗೆಜ್ ಬೇಲ್ಟ್ ನಿಂದ ತಮ್ಮ ಲಗೇಜ್ ನ್ನು ಪಡೆದು ಚೆಕ್ ಮಾಡಿದಾಗ 56 ಗ್ರಾಂ ತೂಕದ ಚಿನ್ನಾಭರಣ (ಮೌಲ್ಯ 4,50,000/-) ಕಳವು ಆಗಿದ್ದು, ಈ ಬಗ್ಗೆ ಪ್ರಯಾಣಿಕರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಳವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಪ್ರಕರಣದ ಹಿಂದೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ AIR INDIA SATS ಕಂಪೆನಿಯಲ್ಲಿ ಲೋಡರ್ ಅನಲೋಡರ್ ಕೆಲಸ ಮಾಡಿಕೊಂಡಿರುವವರ ಕೈವಾಡವಿರೋದು ಗೊತ್ತಾಗಿದೆ. ಅದರಂತೆ ನಾಲ್ವರನ್ನು ಬಂಧಿಸಿದ್ದಾರೆ.

ನಾಲ್ವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ದಿನಾಂಕ 30-08-2025 ರಂದು AIR INDIA EXPRESS ವಿಮಾನದಲ್ಲಿದ್ದ ಲಗೇಜ್ ನಿಂದ ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳು ಮೂಡುಪೆರಾರದ ನಿವಾಸಿ ರವಿರಾಜ್ ಎಂಬಾತನಿಗೆ ಚಿನ್ನಾಭರಣವನ್ನು ಮಾರಿದ್ದು, ಆರೋಪಿಗಳಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ರವಿರಾಜ್ ಕಳವು ಮಾಲನ್ನು ಸ್ವೀಕರಿಸಿದ ಹಿನ್ನೆಲೆ ಆತನನ್ನು ಬಿ.ಎನ್.ಎಸ್ ಆರೋಪದ ಮೇರೆಗೆ ಬಂಧಿಸಲಾಗಿದೆ.

ವಿಚಾರಣೆಯಲ್ಲಿ ಈ ಹಿಂದೆ 2025 ನೇ ಸಾಲಿನ ಜನವರಿ ತಿಂಗಳಿನಲ್ಲಿ ಇದೇ ರೀತಿ ಪ್ರಯಾಣಿಕ ಮನೋಹರ್ ಶೆಟ್ಟಿ ರವರ ಬ್ಯಾಗಿನಿಂದ ಕಳವು ಮಾಡಿದ್ದ 2 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಬಗ್ಗೆ ಈಗಾಗಲೇ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2025  ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿತ್ತು. ಈ ಎಲ್ಲಾ ಆರೋಪಿಗಳು ಸುಮಾರು 9 ವರ್ಷಗಳಿಂದ AIR INDIA SATS ರಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ. ಎಲ್ಲಾ 5 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದು, ಹೆಚ್ಚಿನ ತನಿಖೆಯ ಬಗ್ಗೆ ಪೊಲೀಸ್ ವಶಕ್ಕೆ ಪಡೆಯಲಾಗುವುದು.

ಪ್ರಾಥಮಿಕ ತನಿಖೆಯಲ್ಲಿ ಕಂಡಬಂದಿರುವುದೆನೆಂದರೆ, ವಿಮಾನದ ಪ್ರಾಯಾಣಿಕರು ಬೆಲೆ ಬಾಳುವ ವಸ್ತುಗಳಾದ ಚಿನ್ನ, ನಗದನ್ನು ಬ್ಯಾಗೇಜ್ ನಲ್ಲಿ ಕಳುಹಿಸುವಾಗ ಈ  ಆರೋಪಿಗಳು ಬ್ಯಾಗ್ ತೆರೆದಿದ್ದಲ್ಲಿ ಹುಡುಕುತ್ತಿದ್ದರು ಎನ್ನಲಾಗಿದೆ. ಕೆಲವೊಮ್ಮೆ ಬ್ಯಾಗ್ ಲಾಕ್ ನ ಸುಲಭ ಪಾಸ್ ವಾರ್ಡ್ ಸಂಖ್ಯೆಗಳಿದ್ದಲ್ಲಿ ಪ್ರಯತ್ನಿಸಿ ಕಳವು ಮಾಡುತ್ತಿದ್ದರು ಎನ್ನಲಾಗಿದೆ.  ಪ್ರಯಾಣಿಕರು ಈ ರೀತಿ ನಿರ್ಲಕ್ಷ್ಯತೋರದೇ, ಜಾಗೃತೆಯಿಂದ ಇರಬೇಕಾಗಿ ಪೊಲೀಸರು ಆಯುಕ್ತರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!