Thursday, June 4, 2026
Homeಕರಾವಳಿಮಂಗಳೂರು: ಮಹಿಳೆಯ ಗಮನ ಬೇರೆಡೆಗೆ ಸೆಳೆದು ಕರಿಮಣಿ ಸರ ಕಳ್ಳತನ

ಮಂಗಳೂರು: ಮಹಿಳೆಯ ಗಮನ ಬೇರೆಡೆಗೆ ಸೆಳೆದು ಕರಿಮಣಿ ಸರ ಕಳ್ಳತನ

- Advertisement -
- Advertisement -

ಮಂಗಳೂರು: ಮಹಿಳೆಯ ಗಮನ ಬೇರೆಡೆಗೆ ಸೆಳೆದು ಕರಿಮಣಿ ಸರ ಕಳ್ಳತನ ಮಾಡಿರುವ ಘಟನೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.ಕಡಬದ ಭಾಗೀರಥಿ ಸರ ಕಳೆದುಕೊಂಡವರು. ಅವರು ತಮ್ಮ ಕುಟುಂಬದವರೊಂದಿಗೆ ನ.4ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನ.5ರಂದು ಬೆಳಗ್ಗೆ ಮಂಗಳೂರಿಗೆ ಬಂದಿದ್ದರು.ಅಲ್ಲಿಂದ ಅವರೆಲ್ಲರೂ ಕಡಬಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಈ ವೇಳೆ ಮೂವರು ಮಹಿಳೆಯರು ಆಗಮಿಸಿದ್ದಾರೆ. ಅವರಲ್ಲಿ  ಓರ್ವಳು ಭಾಗೀರಥಿ ಅವರ ಬಳಿ ಕುಳಿತುಕೊಂಡು ಹಣವನ್ನು ಕೆಳಗೆ ಬೀಳಿಸಿ ಹಣ ಬಿದ್ದಿದೆಎಂದು ಗಮನವನ್ನು ಬೇರೆಡೆ ಸೆಳೆದು ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಸುಮಾರು 4 ಪವನ್‌ ತೂಕದ ಸುಮಾರು 1.28 ಲ.ರೂ. ಮೌಲ್ಯದ ಕರಿಮಣಿ ಸರ ಕಳವು ಮಾಡಿದ್ದಾಳೆ ಎಂದು ಬರ್ಕೆ ಪೊಲೀಸರಿಗೆ ದೂರು ನೀಡಲಾಗಿದೆ.

 

- Advertisement -

Latest News

error: Content is protected !!