Thursday, June 4, 2026
Homeಕರಾವಳಿಉಡುಪಿಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಿಂದ ಸರ ಕಳವು

ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಿಂದ ಸರ ಕಳವು

- Advertisement -
- Advertisement -

ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಿಂದ ಸರ ಕಳವು ಮಾಡಿರುವ ಘಟನೆ ಕಾರ್ಕಳ ಮೂರು ಮಾರ್ಗದ ಬಳಿ ನಡೆದಿದೆ.

ಮೂರು ಮಾರ್ಗದ ಬಳಿ ಇರುವ ಅಮಿತ್ ಎಂಬವರ ಉಷಾಲಕ್ಷ್ಮಿ ಜ್ಯುವೆಲ್ಲರಿ ಅಂಗಡಿಗೆ ಅಪರಿಚಿತ ವ್ಯಕ್ತಿ ಬಂದು ಒಂದು ಚಿನ್ನದ ಕರಿಮಣಿ ಸರವನ್ನು ತೋರಿಸುವಂತೆ ಹೇಳಿದ್ದನು.ಅದರಂತೆ ಕೆಲಸದವರು 7.630 ಗ್ರಾಮ್ ತೂಕದ ಚಿನ್ನದ ಕರಿಮಣಿ ಸರವನ್ನು ನೋಡಲು ಕೊಟ್ಟಿದ್ದರು. ಕೆಲಸದವರು ಒಳಗೆ ಹೋಗಿ ವಾಪಾಸು ಬಂದು ನೋಡಿದಾಗ ಆ ವ್ಯಕ್ತಿ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!