Saturday, June 13, 2026
Homeಕರಾವಳಿಮಂಗಳೂರುಮಂಗಳೂರು: ಮನೆಯ ಬೀಗ ಮುರಿದು ಒಳ ನುಗ್ಗಿ  ಚಿನ್ನ ಮತ್ತು ನಗದು ಕಳ್ಳತನ

ಮಂಗಳೂರು: ಮನೆಯ ಬೀಗ ಮುರಿದು ಒಳ ನುಗ್ಗಿ  ಚಿನ್ನ ಮತ್ತು ನಗದು ಕಳ್ಳತನ

- Advertisement -
- Advertisement -

ಮಂಗಳೂರು: ಮನೆಯ ಬೀಗ ಮುರಿದು ಒಳ ನುಗ್ಗಿ  ಚಿನ್ನ ಮತ್ತು ನಗದು ಕಳ್ಳತನ ಮಾಡಿರುವ ಘಟನೆ ಮಂಗಳೂರು ನಗರದ ಮಂಕಿಸ್ಟಾಂಡ್‌ನಲ್ಲಿ ನಡೆದಿದೆ.

ಈ ಬಗ್ಗೆ ಮನೆ ಮಾಲೀಕ ವೈಟ್ ಮೊಂತೆರೋ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು  ನಾನು ಮಾ.16ರಂದು ಸಂಜೆ 5:30ಕ್ಕೆ ಮನೆಗೆ ಬೀಗ ಹಾಕಿ ಮಣಿಪಾಲಕ್ಕೆ ಹೋಗಿದ್ದು, ಮರುದಿನ ಸಂಜೆ 6:45ಕ್ಕೆ ಬಂದು ಮನೆಯ ಬಾಗಿಲು ತೆಗೆಯಲು ಪ್ರಯತ್ನಿದೆ. ಬಾಗಿಲು ತೆರೆಯಲು ಆಗದ ಕಾರಣ ಹಿಂಬ ದಿಯ ಬಾಗಿಲಿನಿಂದ ಮನೆಯ ಒಳಗೆ ಹೋಗಿ ನೋಡಿದಾಗ ಮುಂದಿನ ಬಾಗಿಲಿನ ಲಾಕರ್ ಅನ್ನು ಯಾರೋ ಕಳ್ಳರು ಮುರಿದಿರುವುದು ಕಂಡು ಬಂದಿದೆ. 

ಅಲ್ಲದೆ ಎಲ್ಲಾ ಕಡೆಗಳಲ್ಲಿ ಮನೆಯ ವಸ್ತುಗಳು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಬೆಡ್‌ರೂಮ್‌ನಲ್ಲಿದ್ದ ಲಾಕರ್ ಒಪನ್ ಆಗಿತ್ತು. ಲಾಕರ್‌ನ ಡ್ರಾವೆರ್‌ನಲ್ಲಿದ್ದ ಚಿನ್ನದ 5 ಗ್ರಾಮ್ ತೂಕದ 2 ಉಂಗುರಗಳು ಹಾಗೂ 3 ಗ್ರಾಮ್ ತೂಕದ ಚಿನ್ನದ ಪದಕ, ಲಾಕರ್‌ನಲ್ಲಿದ್ದ 15,000 ರೂ. ನಗದನ್ನು ಕಳವು ಮಾಡಲಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ 80,000 ರೂ. ಹಾಗೂ 15,000 ರೂ. ನಗದು ಕಳವಾಗಿದೆ ಎಂದು ವೈಟ್ ಮೊಂತೆರೋ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!