Thursday, June 25, 2026
Homeಕರಾವಳಿಬಂಟ್ವಾಳ; ತಂದೆ ಮನೆಯಿಂದ ತಾಯಿ ಮನೆಗೆ ಹೋದ ಬಾಲಕಿಯರು ನಾಪತ್ತೆ ; ಪೊಲೀಸರಿಗೆ ದೂರು ನೀಡಿದ...

ಬಂಟ್ವಾಳ; ತಂದೆ ಮನೆಯಿಂದ ತಾಯಿ ಮನೆಗೆ ಹೋದ ಬಾಲಕಿಯರು ನಾಪತ್ತೆ ; ಪೊಲೀಸರಿಗೆ ದೂರು ನೀಡಿದ ತಾಯಿ

- Advertisement -
- Advertisement -

ಬಂಟ್ವಾಳ: ತಂದೆಯ ಮನೆಯಿಂದ ತಾಯಿ ಮನೆಗೆ ಹೋಗುತ್ತೇವೆಂದು  ಹೇಳಿ ಹೋದ ಬಾಲಕಿಯರು ಕಾಣೆಯಾದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆರ್ಕಳ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಬೆರ್ಕಳ ನಿವಾಸಿ ಲವೀನಾ ಅವರ ಹೆಣ್ಮಕ್ಕಳಾದ ಕು.ಶ್ರೇಯಾ ಇವಳ ತಂಗಿ ಅಪ್ರಾಪ್ತ ಬಾಲಕಿ ಇಬ್ಬರು ಕಾಣೆಯಾಗಿದ್ದಾರೆ ಎಂದು ತಾಯಿ ಲವೀನಾ ಪುಂಜಾಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಕಲಿಸಿದ್ದಾರೆ.

ಲವೀನಾ ಅವರ ಗಂಡನ ಮನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿದೆ. ಲವೀನಾ ಅವರು ಕಳೆದ ಕೆಲ ವರ್ಷಗಳಿಂದ ಅವರಿಂದ ದೂರವಾಗಿ ಬೆರ್ಕಳ ಎಂಬಲ್ಲಿ ವಾಸವಾಗಿದ್ದರು.

ಜೂನ್ 7 ರಂದು ಲವೀನಾ ಅವರ ಇಬ್ಬರು ಹೆಣ್ಮಕ್ಕಳು ತಂದೆಯ ಮನೆಗೆ ಹೋಗಿ ಬರುವುದಾಗಿ ಹೋಗಿದ್ದರು. ಅ ಬಳಿಕ ಜೂನ್ 13 ರಂದು ತಂದೆಯ ಮನೆಯಿಂದ ತಾಯಿ ಲವೀನಾ ಅವರ ಮನೆಗೆ ಹೋಗುತ್ತೇವೆ ಎಂದು ‌ಮನೆಯಿಂದ ಹೋದವರು ಮನೆಗೆ ಹೋಗದೆ ಕಾಣೆಯಾಗಿದ್ದಾರೆ.

ಅಕ್ಕ ತಂಗಿ ಇಬ್ಬರು ಬಾಲಕಿಯರು ಕಾಣೆಯಾಗಿರುವುದು ಸಾಕಷ್ಟು ಸಂಶಯಗಳಿಗೆ ಎಡೆಮಾಡಿದೆ.  ಈ ಬಗ್ಗೆ ತಾಯಿ ಲವೀನಾ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಬಾಲಕಿಯರ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಬಾಲಕಿಯರ ಪತ್ತೆಗಾಗಿ ಪುಂಜಾಲಕಟ್ಟೆ ಎಸ್.ಐ.ನಂದಕುಮಾರ್ ಕಾರ್ಯಪ್ರವೃತ್ತರಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!