Thursday, April 25, 2024
Homeತಾಜಾ ಸುದ್ದಿತಾಯಿಗೆ ಚಾಕುವಿನಿಂದ ಇರಿದು ಅಪ್ರಾಪ್ತೆ ಪ್ರಿಯಕರನೊಂದಿಗೆ ಪರಾರಿ

ತಾಯಿಗೆ ಚಾಕುವಿನಿಂದ ಇರಿದು ಅಪ್ರಾಪ್ತೆ ಪ್ರಿಯಕರನೊಂದಿಗೆ ಪರಾರಿ

spot_img
- Advertisement -
- Advertisement -

ಧಾರವಾಡ: ತಾಯಿಗೆ  ಚಾಕುವಿನಿಂದ ಇರಿದು ಅಪ್ತಾಪ್ತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಪ್ರಿಯಕರನ ಜೊತೆ ಸೇರಿ ತಾಯಿಗೆ ಇರಿದು ಬಾಲಕಿ ಪರಾರಿಯಾಗಿದ್ದಾಳೆ. ಕಳೆದ ವರ್ಷ ಇದೇ ಬಾಲಕಿ ವಿಚಾರವಾಗಿ ಪ್ರಿಯಕರ ಜೈಲು ಸೇರಿದ್ದ.ಪೋಕ್ಸೋ ಕಾಯ್ದೆ ಅಡಿ ಪ್ರಿಯಕರನನ್ನು ಬಂಧಿಸಲಾಗಿತ್ತು.

ಆದರೆ ಏಪ್ರಿಲ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಅಪ್ರಾಪ್ತೆ ಕೂಡಾ ಸಾಂತ್ವನ ಕೇಂದ್ರದಲ್ಲಿ ಇದ್ದಳು. ಮಗಳನ್ನು ಕಾಲೇಜಿಗೆ ಸೇರಿಸಲು ತಾಯಿ, ಮನೆಗೆ ವಾಪಸ್‌ ಕದೆರುಕೊಂಡು ಬಂದಿದ್ದರು. ಕಳೆದ ರಾತ್ರಿ ಬಾಲಕಿ ಹಾಗೂ ಆಕೆಯ ಪ್ರೇಮಿ ಸೇರಿ ತಾಯಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ತಾಯಿಯನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -
spot_img

Latest News

error: Content is protected !!