- Advertisement -
- Advertisement -
ಬೆಳ್ತಂಗಡಿ; ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಕರಿಮಣೇಲು ಗ್ರಾಮದ ದರ್ಖಾಸು ಎಂಬಲ್ಲಿ ನಡೆದಿದೆ.ಇಲ್ಲಿನ ಶೇಸಪ್ಪ ನಾಯ್ಕ ಅವರ ಪುತ್ರಿ ಸಂಧ್ಯಾ(22) ಕಾಣೆಯಾದ ಯುವತಿ.
ಸಂಧ್ಯಾ ನವೆಂಬರ್ 4 ರಂದು ಮನೆಯಿಂದ ಕೆಲಸಕ್ಕೆಂದು ಹೋಗಿದ್ದರು. ಹಾಗೇ ಹೋದವರು ಸಂಜೆ ತನ್ನ ಸಹೋದರಿಗೆ ಕರೆ ಮಾಡಿ ನಾನು ಮದುವೆಯಾಗಿದ್ದೇನೆ ನನ್ನನ್ನು ಹುಡುಕಬೇಡಿ ಎಂದು ಹೇಳಿದ್ದಾರೆ.ಅಲ್ಲದೇ ಯುವಕನೊಬ್ಬನೊಂದಿಗಿರುವ ಫೋಟೋ ಒಂದನ್ನು ವಾಟ್ಸಾಪ್ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ. ಅಂದು ಅವರು ಕೆಲಸಕ್ಕೆ ಹೋಗಿರಲಿಲ್ಲ ಎಂದು ವಿಚಾರಿಸಿದಾಗ ಗೊತ್ತಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -