Wednesday, July 22, 2026
Homeಕರಾವಳಿಉಡುಪಿಯ ಮಾರುತಿ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ ಉಜಿರೆಯ ಯುವತಿ ನಾಪತ್ತೆ

ಉಡುಪಿಯ ಮಾರುತಿ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದ ಉಜಿರೆಯ ಯುವತಿ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಉಜಿರೆ ಗ್ರಾಮದ ರೆಂಜಾಳ ಎರ್ನೋಡಿ ನಾಗೇಶ್ ಎಂಬವರ ಪುತ್ರಿ ದಿವ್ಯಶ್ರೀ (24) ಉಡುಪಿಯ ಮಾರುತಿ ಶೋರೂಂ ನಲ್ಲಿ ಕೆಲಸ ಮಾಡಿಕೊಂಡಿದ್ದಳು.  ಪ್ರಸ್ತುತ ವರ್ಕ್ ಫ್ರಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡಿಕೊಂಡು 15 ದಿನಗಳಿಗೊಮ್ಮೆ ಉಡುಪಿಗೆ ಹೋಗಿ ಬರುತ್ತಿದ್ದಳು. 

ದಿನಾಂಕ 11.04.2022 ರಂದು ಬೆಳಿಗ್ಗೆ 8.30 ಗಂಟೆಗೆ ಉಡುಪಿಗೆಂದು ಮನೆಯಿಂದ ಹೋದವಳು ಸಂಬಂಧಿಕರ ಮನೆಯಾದ ಬಜಗೋಳಿಯ ಆಕೆಯ ಚಿಕ್ಕಮ್ಮ ಭಾರತಿರವರ ಮನೆಯಲ್ಲಿ 3-4 ದಿನ ಉಳಿದುಕೊಂಡಿದ್ದಳು.  ದಿನಾಂಕ 15.04.2022 ರಂದು ಬೆಳಿಗ್ಗೆ 7.30 ಗಂಟೆಗೆ ಬಜಗೋಳಿಯಿಂದ ಕುಂದಾಪುರಕ್ಕೆ ಹೋಗಿ ಬರುತ್ತೇನೆಂದು ಆಕೆಯ ಚಿಕ್ಕಮ್ಮನಲ್ಲಿ ಹೇಳಿ ಹೋದವಳು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಬಂದಿಲ್ಲ.

 ಆಕೆಯು ಪೋನ್ ಕರೆ ಮಾಡಿದಾಗ ಸ್ವಿಚ್ ಆಫ್  ಅಂತಾ ಬಂದಿದೆ. ಅಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕೂಡ ಕೊಂಡೊಯ್ದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!