Friday, October 11, 2024
Homeಇತರಎಣ್ಣೆ ಕಿಕ್‍ನಲ್ಲಿ ತೂರಾಡಿ ಗಲಾಟೆ ಮಾಡಿದ ಯುವತಿ

ಎಣ್ಣೆ ಕಿಕ್‍ನಲ್ಲಿ ತೂರಾಡಿ ಗಲಾಟೆ ಮಾಡಿದ ಯುವತಿ

spot_img
- Advertisement -
- Advertisement -

ಮಡಿಕೇರಿ : ಎಣ್ಣೆ ಕಿಕ್‍ನಲ್ಲಿ ತೂರಾಡಿ ಯುವತಿಯೊಬ್ಬಳು ಗಲಾಟೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ, ಹೀಗಾಗಿ ಇಂದು ಪೇಟೆಗೆ ಆಗಮಿಸಿದ ಯುವತಿಯೊಬ್ಬಳು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ತೆಗೆದುಕೊಂಡು ಕುಡಿದು, ಅಲ್ಲೇ ತೂರಾಡಿದ್ದಾಳೆ ಎನ್ನಲಾಗಿದೆ.

ಇದೇ ವೇಳೆ ಕಿಕ್‌ನಿಂದ ಸುಧಾರಿಸಿಕೊಳ್ಳದ ಆ ಯುವತಿ ದಾರಿಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಕಲ್ಲಿನಿಂದ ಹೊಡೆಯಲು ಶುರುಮಾಡಿದ್ದಾಳೆ. ಇದೇ ವೇಳೆ ದಾರಿ ಹೋಕರು ಆಕೆಯನ್ನು ಸರಿ ದಾರಿಗೆ ತರಲು ಹರ ಸಾಹಸ ಪಟ್ಟರು ಎನ್ನಲಾಗಿದೆ.

- Advertisement -
spot_img

Latest News

error: Content is protected !!