- Advertisement -
- Advertisement -
ಬಂಟ್ವಾಳ: ಬಸ್ ಸಂಚಾರ ವ್ಯವಸ್ಥೆಯನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಹಿಂದಿನಂತೆ ನಡೆಯುವ ಚಿತ್ರಣಗಳು ಬಿಸಿರೋಡಿನಲ್ಲಿ ಇಂದು ಕಂಡು ಬಂದಿತು.
ವಾಹನಗಳ ಓಡಾಟದ ಸಂಖ್ಯೆಯೂ ವಿಪರೀತವಾಗಿತ್ತು. ವೈನ್ ಶಾಪ್ ಗಳ ಬಾಗಿಲಲ್ಲಿ ಜನರ ಕ್ಯೂ. ಜನರು ಜೈಲಿನಿಂದ ಬಿಡುಗಡೆಯಾದ ರೀತಿ ವರ್ತಿಸುತ್ತಿದ್ಧರು. ಕಳೆದ ಒಂದುವರೆ ತಿಂಗಳಿನಿಂದ ಲಾಕ್ ಡೌನ್ ಗೆ ಒಳಗಾಗಿದ್ದ ಬಂಟ್ವಾಳ ತಾಲೂಕಿನ ಬಹುತೇಕ ಎಲ್ಲಾ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ಭರದಿಂದ ಸಾಗಿತು.
ಜನ ಸಂಚಾರ ಮಾಡುವುದು ನೋಡಿದರೆ ಕೊರೊನಾದಿಂದ ನಾವು ಮುಕ್ತರಾದೆವು ಅನ್ನಿಸುತ್ತಿತ್ತು. ಬಂಟ್ವಾಳ ಪೇಟೆಯಲ್ಲಿ ಮೂರು ಜೀವಗಳು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಉಳಿದಂತೆ ಇನ್ನೂ ಮೂರು ಪಾಸಿಟಿವ್ ಪ್ರಕರಣಗಳು ಇವೆ ಎಂಬುದು ಬಂಟ್ವಾಳದ ಜನತೆಯಲ್ಲಿರಲಿಲ್ಲ. ಬಂಟ್ವಾಳದಲ್ಲಿ ಏನೂ ಆಗಿಲ್ಲ ಅನ್ನುವ ರೀತಿ ಓಡಾಟಗಳು ನಡೆಯುತ್ತಿವೆ. ಇಷ್ಟರವರೆಗಿನ ಅಧಿಕಾರಿಗಳ ಶ್ರಮಕ್ಕೆ ಇಂದು ಒಂದು ಹನಿ ನೀರು ಬಿಟ್ಟಂತಾಗಿದೆ.
- Advertisement -