Saturday, June 29, 2024
HomeUncategorizedಕೊಡಗು; ಹೃದಯಾಘಾತಕ್ಕೆ 24 ವರ್ಷದ ಯುವತಿ ಬಲಿ

ಕೊಡಗು; ಹೃದಯಾಘಾತಕ್ಕೆ 24 ವರ್ಷದ ಯುವತಿ ಬಲಿ

spot_img
- Advertisement -
- Advertisement -

ಕೊಡಗು; ಇತ್ತೀಚಿನ ದಿನಗಳಲ್ಲಿ ಯಾರಿಗೆ ಯಾವಾಗ ಏನಾಗುತ್ತೆ ಅನ್ನೋದನ್ನು ಹೇಳೋದಕ್ಕೆ ಆಗಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಈಗಷ್ಟೇ ಚೆನ್ನಾಗಿದ್ದವರಿಗೆ ಕೆಲವೇ ಸೆಕೆಂಡ್ ಗಳಲ್ಲಿ ಸಾವು ಬರಬಹುದು ಹಾಗಾಗಿದೆ ಕಾಲ. ಅದರಲ್ಲೂ ಹೃದಯಾಘಾತ ಅನ್ನೋದು ವಯಸ್ಸಿನ ಅಂತರವಿಲ್ಲದೇ ಚಿಕ್ಕವಯಸ್ಸಿನಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಬಲಿ ಪಡೆಯುತ್ತಿದೆ.

ಇದೀಗ ಕೊಡಗಿನಲ್ಲಿ 24 ವರ್ಷದ ಯುವತಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ಮಣವಟ್ಟಿರ ಪೊನ್ನು ಅವರ ಪುತ್ರಿ ನಿಲಿಕ ಪೊನ್ನಪ್ಪ(24) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಹೃದಯಘಾತದಿಂದ ಕುಸಿದು ಬಿದ್ದು ಅವರು ಸಾವನ್ನಪ್ಪಿದ್ದಾರೆ.

ನಿಲಿಕ ಮಡಿಕೇರಿ ತಾಲೂಕಿನಲ್ಲಿ ಕಚೇರಿ ಒಂದರಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!