Wednesday, June 3, 2026
Homeತಾಜಾ ಸುದ್ದಿಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವನ ಜೊತೆ ಲವ್: ಕೊನೆಗೆ ಆತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ...

ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವನ ಜೊತೆ ಲವ್: ಕೊನೆಗೆ ಆತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ

- Advertisement -
- Advertisement -

ಕೋಲಾರ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಗೆಳಯನನ್ನು ನಂಬಿ ಬಂದ ಯುವತಿ, ಕೊನೆಗೆ ಆತನ ಮನೆಯಲ್ಲಿ ನೇಣು ಬಿಗಿದುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರ ಹೊಸಕೋಟೆ ನಗರದ ಎಂವಿ ಬಡಾವಣೆಯಲ್ಲಿ ನಡೆದಿದೆ.

ಅಶ್ವಿನಿ (23) ಮೃತ ಯುವತಿ. ತುಮಕೂರಿನ ಕೊರಟಗೆರೆ ಮೂಲದ ನಿವಾಸಿಯಾದ ಈಕೆ ಎರಡು ವರ್ಷಗಳಿಂದ ಫೇಸ್‍ಬುಕ್‍ನಲ್ಲಿ ಪರಿಚಯವಾದ ಸುರೇಶ್‍ನನ್ನು ಪ್ರೀತಿಸುತ್ತಿದ್ದಳು. ಆದರೆ ಇದೀಗ ಸುರೇಶ್ ನ ಮನೆಯಲ್ಲಿ ಈಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಎರಡು ವರ್ಷ ಹಿಂದೆ ಸೋಶಿಯಲ್ ಮೀಡಿಯಾ ಮೂಲಕವಾಗಿ ಸುರೇಶ್‍ನ ಪರಿಚಯವಾಗಿತ್ತು. ಬಳಿಕ ಆತನನ್ನು ಪ್ರೀತಿಸುತ್ತಿದ್ದಳು. ಸುರೇಶ್ 2 ತಿಂಗಳ ಹಿಂದೆ ಅಶ್ವಿನಿಯನ್ನ ಹೊಸಕೋಟೆಗೆ ಕರೆ ತಂದು ಬಾಡಿಗೆ ಮನೆಯಲ್ಲಿಟ್ಟಿದ್ದನು. ಅಲ್ಲದೇ ಸುರೇಶ್ ವಂಚನೆ ಮಾಡಿದ್ದಾನೆ ಎಂದು ಎರಡು ದಿನಗಳಿಂದೆ ಅಶ್ವಿನಿ ಸೂಲಿಬೆಲೆ ಪೊಲೀಸ್ ಠಾಣೆ ಮೊರೆ ಹೋಗಿದ್ದಳು. ಸೂಲಿಬೆಲೆ ಪೊಲೀಸರು ರಾಜಿ ಮಾಡಿ ಕಳುಹಿಸಿದ್ದರು ಎನ್ನಲಾಗಿದೆ.

ಇದೀಗ ಅಶ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿನಿಂದ ಕುಟುಂಬಸ್ಥರಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸುರೇಶ್ ಕೊಲೆ ಮಾಡಿರುವುದಾಗಿ ಅಶ್ವಿನಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಘಟನೆ ನಂತರ ಸುರೇಶ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸೋಶಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಮಾಡಿ ಎಸ್ಕೇಪ್ ಆಗಿದ್ದಾನೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!