Thursday, June 4, 2026
Homeಪ್ರಮುಖ-ಸುದ್ದಿಗೆಳತಿಯೊಂದಿಗೆ ವಿವಾಹವಾಗಲು ಮನೆಯವರ ವಿರೋಧ : ಕೊನೆಗೆ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ

ಗೆಳತಿಯೊಂದಿಗೆ ವಿವಾಹವಾಗಲು ಮನೆಯವರ ವಿರೋಧ : ಕೊನೆಗೆ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ

- Advertisement -
- Advertisement -

ಉತ್ತರ ಪ್ರದೇಶ; ಗೆಳತಿಯನ್ನು ವಿವಾಹವಾಗಲು ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ತನ್ನ ಲಿಂಗವನ್ನೇ ಬದಲಾಯಿಸಿಕೊಂಡ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಲೆಸ್ಬಿಯನ್ನರಾದ ಇಬ್ಬರು ಯುವತಿಯರು ಪರಸ್ಪರ ವಿವಾಹವಾಗೋದಕ್ಕೆ ನಿರ್ಧರಿಸಿದ್ದಾರೆ. ಆದರೆ ಕುಟುಂಬವು ಅವರ ಸಂಬಂಧವನ್ನು ಒಪ್ಪಿಕೊಳ್ಳದಿದ್ದಾಗ, ಅವರಲ್ಲಿ ಒಬ್ಬರು ತನ್ನ ಲಿಂಗವನ್ನು ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಯುವತಿಯರು ಹುಚ್ಚರಂತೆ ಪ್ರೀತಿಸುತ್ತಿದ್ದರು, ಕುಟುಂಬದ ವಿರೋಧಗಳನ್ನು ತಪ್ಪಿಸಲು ಮತ್ತು ಇತರ ಜನರ ಹಸ್ತಕ್ಷೇಪವನ್ನು ತಡೆಯಲು‌ ಓರ್ವ ಯುವತಿ ತನ್ನ ಲಿಂಗವನ್ನು ಬದಲಾಯಿಸಲು ನಿರ್ಧರಿಸಿದ್ದಾಳೆ.

ಅದರಂತೆ, ಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ವೈದ್ಯರ ತಂಡವು ಆಕೆಯ ದೇಹದ ಮೇಲ್ಭಾಗ ಮತ್ತು ಎದೆಯ ಪುನರ್ರಚನೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಇನ್ನೂ 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ.ಬಳಿಕ ಅವರಿಬ್ಬರು ವಿವಾಹವಾಗಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!