Saturday, May 18, 2024
Homeಕರಾವಳಿಮಂಗಳೂರು : ಗಾಂಜಾ ದಂಧೆ ಪ್ರಕರಣ; ವೈದ್ಯಕೀಯ ವಿದ್ಯಾರ್ಥಿಗಳ ಸೆರೆ

ಮಂಗಳೂರು : ಗಾಂಜಾ ದಂಧೆ ಪ್ರಕರಣ; ವೈದ್ಯಕೀಯ ವಿದ್ಯಾರ್ಥಿಗಳ ಸೆರೆ

spot_img
- Advertisement -
- Advertisement -

ಮಂಗಳೂರು : ಗಾಂಜಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ಒಂಬತ್ತು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.


ಈ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ . ಶಶಿಕುಮಾರ್ ಅವರು ಮಾಹಿತಿ ನೀಡಿದ್ದು,  ದೂರಿನ ಆಧಾರದ ಮೇಲೆ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ಮೊದಲು ಬಂಧಿಸಲಾಗಿದೆ. ಈತ ಯುಕೆಯ ಪ್ರಜೆ. ಎನ್ ಆರ್ ಐ ಕೋಟಾದಲ್ಲಿ ಡೆಂಟಲ್ ವಿದ್ಯಾರ್ಥಿಯಾಗಿದ್ದು ಕಳೆದ ಹದಿನೈದು ವರ್ಷಗಳಿಂದಲೂ ವಿದ್ಯಾಭ್ಯಾಸ ಮಾಡುತ್ತಿದ್ದು,ಆತನಿಗೆ ಶಿಕ್ಷಣ ಇನ್ನೂ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಗಾಂಜಾ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ. ನೀಲ್ ಕಿಶೋರಿಲಾಲ್ ವಿದ್ಯಾರ್ಥಿನಿಯರು ಮತ್ತು ವೈದ್ಯರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ. ಸಾಕಷ್ಟು ಪೂರಕ ಸಾಕ್ಷಧಾರಗಳಿಂದ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದರು.

ಬಂಧಿತ ಆರೋಪಿಗಳನ್ನು ಕೇರಳ ಮೂಲದ ಸಮೀರ್ (32), ನಾಡಿಯಾ ಸಿರಾಜ್ (24), ತಮಿಳುನಾಡಿನ ಮಣಿಮಾರನ್ ಮುತ್ತು (28), ಆಂಧ್ರದ ವರ್ಷಿಣಿ ಪ್ರತಿ (26), ಭಾನು ಧಾಹಿಯಾ (27), ಚಂಡಿಘಡದ ರಿಯಾ ಚಡ್ಡಾ (22), ದೆಹಲಿಯ ಕ್ಷಿತಿಜ್ ಗುಪ್ತಾ (25), ಮಹಾರಾಷ್ಟ್ರದ ಇರಾ ಬಸಿನ್ (23) ಮತ್ತು ಮೊಹಮ್ಮದ್ ರೌಫ್ ಗೌಸ್ (34) ಎಂದು ಗುರುತಿಸಲಾಗಿದೆ.

ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ನೀಲ್ ಕಿಶೋರಿಲಾಲ್ ರಾಮ್ ಜಿ ಶಾನನ್ನ ಮೊದಲು ಬಂಧಿಸಲಾಗಿದೆ. ಆತನ ಬಳಿ 50 ಸಾವಿರ ಮೌಲ್ಯದ 2 ಕೆಜಿ ಗಾಂಜಾ, ಮೊಬೈಲ್ ಮತ್ತು ನಗದನ್ನು ಮತ್ತು ಆಟಿಕೆ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ. ಆ ಬಳಿಕ ಕಾರ್ಯಾಚರಣೆ ನಡೆಸಿ ಉಳಿದವರನ್ನು ಪಿಜಿಗಳು, ಹಾಸ್ಟೆಲ್ ಮತ್ತು ಬಾಡಿಗೆ ಮನೆಗಳಿಂದ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

- Advertisement -
spot_img

Latest News

error: Content is protected !!