Saturday, June 29, 2024
Homeತಾಜಾ ಸುದ್ದಿಬರ್ತಡೇ ಪಾರ್ಟಿಗೆಂದು ಕರೆದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ ಪಾಪಿಗಳು

ಬರ್ತಡೇ ಪಾರ್ಟಿಗೆಂದು ಕರೆದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ ಪಾಪಿಗಳು

spot_img
- Advertisement -
- Advertisement -

ಹೈದರಾಬಾದ್ : ಬರ್ತಡೇ ಪಾರ್ಟಿಗೆಂದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಅಕ್ಟೋಬರ್ 5 ರಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಅಕ್ಟೋಬರ್ 5ರಂದು ಜುಬಿಲಿ ಹಿಲ್ಸ್ ನಿವಾಸಿಯಾಗಿರುವ ಪದವಿ ವಿದ್ಯಾರ್ಥಿನಿಯನ್ನು ಬರ್ತಡೇ ಪಾರ್ಟಿಗೆ ಕರೆಯಲಾಗಿದೆ. ಸ್ನೇಹಿತ ಎಂ.ಜೋಸೆಫ್ ಆಕೆಯನ್ನು ಹೋಟೆಲ್ ಗೆ ಆಹ್ವಾನಿಸಿದ್ದಾನೆ. ಸಿಕಂದರಾಬಾದ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೂರು ತಿಂಗಳ ಹಿಂದೆ ಜೋಸೆಫ್ ಭೇಟಿಯಾಗಿ ಇಬ್ಬರೂ ಸ್ನೇಹಿತರಾಗಿದ್ದರು. ಜೋಸೆಫ್ ಸ್ನೇಹಿತರಾದ ಬಿ. ನವೀನ್ ರೆಡ್ಡಿ ಮತ್ತು ಆರ್. ರಾಮು ಕೂಡ ಪರಿಚಿತರಾಗಿದ್ದರು.

ಬಳಿಕ ಟ್ಯಾಂಕ್ ಬಂಡ್ ರೋಡ್ ಗೆ ಬಂದಿದ್ದ ಇವರೆಲ್ಲ ನಂತರ ಕೆ.ಪಿ.ಹೆಚ್.ಬಿ. ಮೆಟ್ರೋ ನಿಲ್ದಾಣದ ಸಮೀಪವಿರುವ ಹೋಟೆಲ್ ಗೆ ಹೋಗಿದ್ದಾರೆ. ಪಾರ್ಟಿಯಲ್ಲಿ ಮತ್ತು ಬರುವ ಪದಾರ್ಥ ಬೆರೆಸಿದ್ದ ಕೇಕ್ ತಿನ್ನಿಸಲಾಗಿದೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.

ಹುಡುಗಿಗೆ ಎಚ್ಚರವಾದ ನಂತರ ಬೆದರಿಕೆ ಹಾಕಿದ ಆರೋಪಿಗಳು ಆಕೆಯನ್ನು ಕಳಿಸಿದ್ದಾರೆ. ಘಟನೆ ನಡೆದ ಒಂದೆರಡು ದಿನಗಳ ನಂತರ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ತನ್ನ ತಾಯಿಗೆ ಮಾಹಿತಿ ನೀಡಿದ್ದು ಪೋಷಕರು ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕುಕಟಪಲ್ಲಿ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

- Advertisement -
spot_img

Latest News

error: Content is protected !!