Tuesday, May 14, 2024
Homeಅಪರಾಧಮಂಗಳೂರು: ಆರೋಗ್ಯಾಧಿಕಾರಿ ಎಂದು ಸುಳ್ಳು ಹೇಳಿ ನಗ-ನಗದು ದೋಚಿದರು..!

ಮಂಗಳೂರು: ಆರೋಗ್ಯಾಧಿಕಾರಿ ಎಂದು ಸುಳ್ಳು ಹೇಳಿ ನಗ-ನಗದು ದೋಚಿದರು..!

spot_img
- Advertisement -
- Advertisement -

ಮಂಗಳೂರು: ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಂದು ಸುಳ್ಳು ಹೇಳಿ ತಂಡವೊoದು ಮಹಿಳೆಯೊಬ್ಬರು ವಾಸಿಸುತ್ತಿದ್ದ ಮನೆಗೆ ಪ್ರವೇಶಿಸಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾದ ಘಟನೆ ಉರ್ವಾದಲ್ಲಿ ನಡೆದಿದೆ.


ದಡ್ಡಲ್‌ಕಾಲ್ ನಿವಾಸಿ ವೀರಪ್ಪ ಎಂಬವರ ಮನೆಗೆ ನ.16 ರಂದು ಬೆಳಗ್ಗೆ 10:30 ಗಂಟೆಗೆ ಇಬ್ಬರು ಅಪರಿಚಿತರು ಆಗಮಿಸಿ ಮನಪಾ ಆರೋಗ್ಯ ಇಲಾಖೆಯ ಅಧಿಕಾರಿ ನಿಮ್ಮ ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದೇವೆ ಎಂದು ಸುಳ್ಳು ಹೇಳಿದ ತಂಡವು, ನೀರಿನ ಸಂಪ್ ನೋಡಬೇಕೆಂದು ಹೇಳಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಸಹಿತ ಆರೋಪಿಗಳು ಟೆರೇಸಿಗೆ ಹೋದಾಗ ಅದೇ ಸಂದರ್ಭದಲ್ಲಿ ಮತ್ತೊಬ್ಬ ಆರೋಪಿ ಆಗಮಿಸಿ ನೇರವಾಗಿ ಮನೆಗೆ ಪ್ರವೇಶಿಸಿದ್ದಾರೆ. ಕಪಾಟಿನಲ್ಲಿ ಕೀ ನೇತುಹಾಕಿದ ಸ್ಥಿತಿಯಲ್ಲಿ ಇದ್ದ ಕಾರಣ ಬಾಗಿಲು ತೆರೆದು 68 ಗ್ರಾಂ ಚಿನ್ನಾಭರಣ ಮತ್ತು 1೦೦೦ ರೂಪಾಯಿ ನಗದು ಹಣ ದೋಚಿದ್ದಾರೆ.


ತದನಂತರ ಸ್ಥಳೀಯರಿಗೆ ತಂಡದ ಕುರಿತು ಅವಮಾನ ಬಂದು ನೀವು ಮಹಾನಗರ ಪಾಲಿಕೆ ಸಿಬ್ಬಂದಿ ಅನ್ನೋದಕ್ಕೆ ದಾಖಲೆ ಏನಿದೆ ಎಂದು ಕೇಳಿದ್ದಾರೆ ಅಷ್ಟರಲ್ಲಿ ಅಲ್ಲಿದ್ದ ಬೈಕ್‌ನಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಧಿಸಿ ಕೆಲವೊಂದು ದಾಖಲೆಗಳು ಸಿಸಿ ಕ್ಯಾಮರಾದಲ್ಲಿ ದೊರೆತಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!