Friday, March 29, 2024
Homeಕರಾವಳಿಅರಂತೋಡು ಕಾಲೇಜಿನಲ್ಲಿ ಗಾನ ಯಾನ -ಗೀತಾ ಗಾಯನ ಸಂಭ್ರಮ

ಅರಂತೋಡು ಕಾಲೇಜಿನಲ್ಲಿ ಗಾನ ಯಾನ -ಗೀತಾ ಗಾಯನ ಸಂಭ್ರಮ

spot_img
- Advertisement -
- Advertisement -

ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ, ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಮತ್ತು ಭಾವನ ಸುಗಮ ಸಂಗೀತ ಬಳಗ (ರಿ.) ಸುಳ್ಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ “ಸಾಹಿತ್ಯ ಸಂಭ್ರಮ 2022” ಅಂಗವಾಗಿ ಗಾನ ಯಾನ-ಗೀತ ಗಾಯನ ಕಾರ್ಯಕ್ರಮ ನಡೆಯಿತು.

26ನೇ ಸುಳ್ಯ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಕಾಲೇಜಿನ ಸಂಚಾಲಕ ಶ್ರೀ ಕೆ.ಆರ್. ಗಂಗಾಧರ್  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಶ್ರೀ.ಕೆ.ಆರ್.ಗಂಗಾಧರ್ ರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಜತ್ತಪ್ಪ ಮಾಸ್ತರ್, ಗೌರವ ಕಾರ್ಯದರ್ಶಿ ಶ್ರೀ ತೇಜಸ್ವಿ ಕಡಪಳ ಮತ್ತು ಶ್ರೀ ರಾಮಚಂದ್ರ ಪಲ್ಲದಡ್ಕ, ಶ್ರೀ ಕೇಶವ ಮಾಸ್ತರ್ ಉಪಸ್ಥಿತರಿದ್ದರು.

ಭಾವನ ಬಳಗದ ಶ್ರೀ ಕೆ ಆರ್ ಗೋಪಾಲಕೃಷ್ಣ ನೇತೃತ್ವದಲ್ಲಿ ಶ್ರೀಮತಿ ರಮ್ಯಾ ದಿಲೀಪ್, ಶ್ರೀ ತೇಜಸ್ ಕಲ್ಲುಗುಂಡಿ, ಶ್ರೀಮತಿ ಗಿರಿಜಾ ಮತ್ತು ಶ್ರೀಮತಿ ಯಶೋದ ಗಾನ ಯಾನ -ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಪಿಡಿಒ ಶ್ರೀ ಯು.ಡಿ.ಶೇಖರ್ ಇವರಿಗೆ  ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಸುಳ್ಯ ಸಾಹಿತ್ಯ ಪರಿಷತ್  ಅಧ್ಯಕ್ಷ ರಾದ ಶ್ರೀ ಚಂದ್ರಶೇಖರ್ ಪೇರಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ಸ್ವಾಗತಿಸಿದರು.

ಉಪನ್ಯಾಸಕ ಶ್ರೀ ಮೋಹನ್ ಚಂದ್ರ ವಂದಿಸಿದರು.ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರಚನಾ ಮತ್ತು ಬಳಗ ಪ್ರಾರ್ಥಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕಲಾ ಸಂಘ ವಿದ್ಯಾರ್ಥಿಗಳು,ಧ್ವನಿವರ್ಧಕ ವ್ಯವಸ್ಥೆಯಲ್ಲಿ ಶ್ರೀ ರಾಧಾಕೃಷ್ಣ ಸಹಕರಿಸಿದರು.ಕಾಲೇಜಿನ ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂಧಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!