Friday, June 5, 2026
Homeಕರಾವಳಿಬೆಳ್ತಂಗಡಿ : ಕಲ್ಮಂಜದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಉದಯ ಗೌಡ ಸಾವು ಪ್ರಕರಣ: ಬಂಧಿತ ಮೂವರಿಗೆ...

ಬೆಳ್ತಂಗಡಿ : ಕಲ್ಮಂಜದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಉದಯ ಗೌಡ ಸಾವು ಪ್ರಕರಣ: ಬಂಧಿತ ಮೂವರಿಗೆ ಜಾಮೀನು ಮಂಜೂರು

- Advertisement -
- Advertisement -

ಬೆಳ್ತಂಗಡಿ : ಮನೆಯಿಂದ ತೋಟಕ್ಕೆ ಹೋಗಿದ್ದ ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ ಅವರು ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ಕಾರಣದಿಂದ ಬಂಧಿತರಾಗಿದ್ದ ಮೂವರಿಗೆ ಬೆಳ್ತಂಗಡಿ ನ್ಯಾಯಾಲಯ ಸಂಜೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನಿಲ ನಿವಾಸಿ ಹರೀಶ್ ಗೌಡ(59) , ಕರಿಯನಿಲ ನಿವಾಸಿ ಸುಮಂತ್ (21) ,ಕರಿಯನಿಲ ನಿವಾಸಿ ಪ್ರಶಾಂತ್ (30) ನ್ನು ಧರ್ಮಸ್ಥಳ ಪೊಲೀಸರು ರೆಖ್ಯಾ ಗ್ರಾಮದ ಎಂಜಿರಾ ಪ್ರದೇಶದಲ್ಲಿ ಗುರುವಾರ ಸಂಜೆ ಬಂಧಿಸಿದ್ದರು ಇಂದು(ಶುಕ್ರವಾರ) ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳ್ಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್  ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ(43) ಅವರು ತೋಟಕ್ಕೆ ಹೋಗುವ ದಾರಿ ಮಧ್ಯೆ ಶಿವಪ್ಪ ಗೌಡ ಎಂಬವರ ಪಾಳುಬಿದ್ದ ಗದ್ದೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸಹೋದರ ಯೋಗೀಶ ಕೆ ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ  ಕಲಂ: 304 (A), 139  ಎಲೆಕ್ಟ್ರಿಸಿಟಿ ಆ್ಯಕ್ಟ್  2003 ,ಜೊತೆಗೆ 34 ಐ ಪಿ ಸಿ ಯಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು

- Advertisement -

Latest News

error: Content is protected !!