Thursday, June 4, 2026
Homeಕರಾವಳಿಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್ಪಿಯಾಗಿ ಡಾ.ಗಾನ ಪಿ.ಕುಮಾರ್ ನೇಮಕ

ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್ಪಿಯಾಗಿ ಡಾ.ಗಾನ ಪಿ.ಕುಮಾರ್ ನೇಮಕ

- Advertisement -
- Advertisement -

ಪುತ್ತೂರು; ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್ಪಿಯಾಗಿ ಡಾ.ಗಾನ ಪಿ.ಕುಮಾರ್  ಅವರನ್ನು ನೇಮಕ ಮಾಡಲಾಗಿದೆ.

ಪುತ್ತೂರಿನಲ್ಲಿ ಎರಡು ವರ್ಷ ಡಿವೈಎಸ್ಪಿಯಾಗಿದ್ದ ಡಾ. ಗಾನ ಪಿ. ಕುಮಾರ್ ಅವರನ್ನು ಸಿಐಡಿ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು. ಬಳಿಕ ವರ್ಗಾವಣೆ ರದ್ದುಗೊಳಿಸಿ ಎಸ್ಪಿ ಕಛೇರಿಯ ಡಿ.ಸಿ.ಆರ್.ಬಿ. ಡಿವೈಎಸ್ಪಿಯನ್ನಾಗಿ ನಿಯೋಜಿಸಲಾಗಿತ್ತು. ಪುತ್ತೂರು ಡಿವೈಎಸ್ಪಿಯಾಗಿ ಡಾ| ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿತ್ತು.

ಇದೀಗ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಡಾ. ವೀರಯ್ಯ ಹಿರೇಮಠ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದ್ದು ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ತೋರಟ್ ಅವರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಡಾ.ಗಾನಾ ಪಿ. ಕುಮಾರ್ ಅವರನ್ನು ಪುತ್ತೂರಿಗೆ ಪ್ರಭಾರ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಿ ಹಿರಿಯ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ

- Advertisement -

Latest News

error: Content is protected !!