- Advertisement -
- Advertisement -
ನವದೆಹಲಿ: ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 10 ರೂ. ಹೆಚ್ಚಳವಾಗಿದೆ. ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ದರ ಹೆಚ್ಚಳ ಮಾಡಲಾಗಿದೆ.
ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರ 13 ರೂಪಾಯಿ ಹೆಚ್ಚಳವಾಗಿದೆ. ಕೇವಲ ತೈಲ ಕಂಪನಿಗಳಿಗೆ ಮಾತ್ರ ಶುಲ್ಕ ಹೆಚ್ಚಳದ ಹೊರೆಯಾಗಲಿದೆ. ಸುಂಕ ಹೆಚ್ಚಳದಿಂದ ವಾಹನ ಸವಾರರಿಗೆ ಹೊರೆಯಾಗುವುದಿಲ್ಲ. ಹಳೆ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಿಗಲಿದೆ.
ತೈಲ ಕಂಪನಿಗಳಿಗೆ ಮಾತ್ರ ಸುಂಕ ಹೆಚ್ಚಳದ ಹೊರೆಯಾಗಲಿದೆ. ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವುದಿಲ್ಲ ಎಂದು ಹೇಳಲಾಗಿದೆ. ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದು ಪೆಟ್ರೋಲ್ ಲೀಟರ್ ಗೆ 10 ರೂ., ಡೀಸೆಲ್ ಲೀಟರ್ ಗೆ 13 ರೂ. ದಾಖಲೆಯ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಇದರಿಂದ ಕೇಂದ್ರಕ್ಕೆ1.6 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ಸಿಗಲಿದೆ.
- Advertisement -