- Advertisement -
- Advertisement -
ಮಂಗಳೂರು: ಇಂದು ಬೆಳಿಗ್ಗೆ ನಗರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯಹುಟ್ಟಿಸಿದ್ದ ಕಾಡುಕೋಣ ಸಾಯಂಕಾಲದ ವೇಳೆಗೆ ಮೃತಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಂಗಳೂರು ನಗರದ ಕೆಲ ಬೀದಿಗಳಲ್ಲಿ ಓಡಾಡುತ್ತಿದ್ದ ಕಾಡುಕೋಣಕ್ಕೆ ಅರಣ್ಯ ಇಲಾಖಾ ಸಿಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಆ ಬಳಿಕ ಕ್ರೇನ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ಲಾರಿಯಲ್ಲಿ ಚಾರ್ಮಾಡಿ ಘಾಟಿ ಬಳಿ ಇರುವ ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದರು.
ಆ ಪ್ರದೇಶಕ್ಕೆ ತೆರಳುವ ವೇಳೆಗಾಗಲೇ ಕಾಡುಕೋಣ ಕೊನೆಯುಸಿರೆಳೆದಿದೆ. ಬಳಿಕ ಪಶುವೈದ್ಯರು ಪರಿಶೀಲನೆ ನಡೆಸಿ, ಕಾಡಿಕೋಣವು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಖಚಿತಪಡಿಸಿದ್ದಾರೆ ಎಂದು ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
- Advertisement -