Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮೂರು ಬುರುಡೆಗಳ ಎಫ್ಎಸ್ಎಲ್ ವರದಿ ಬಹಿರಂಗ

ಬೆಳ್ತಂಗಡಿ : ಮೂರು ಬುರುಡೆಗಳ ಎಫ್ಎಸ್ಎಲ್ ವರದಿ ಬಹಿರಂಗ

- Advertisement -
- Advertisement -

ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಮೊದಲು ಎಸ್.ಐ.ಟಿ ಅಧಿಕಾರಿಗಳು ಪತ್ತೆ ಮಾಡಿದ್ದ ಎರಡು ಮಾನವನ ಅಸ್ಥಿಪಂಜರಗಳು ಮತ್ತು ಚಿನ್ನಯ್ಯ ತಂದ ತಲೆಬರುಡೆಯ ಎಫ್ಎಸ್ಎಲ್ ವರದಿ ಬಹಿರಂಗವಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಶೋಧದ ವೇಳೆ ಆರನೇ ಗುರುತು ಮಾಡಿದ ಜಾಗದಲ್ಲಿ ಪತ್ತೆಯಾದ ತಲೆಬುರುಡೆ ಸಹಿತ ಅಸ್ಥಿಪಂಜರ 25-30 ವರ್ಷ ವಯಸ್ಸಿನ ಪುರುಷನದ್ದಾಗಿದೆ, ಹಾಗೂ 11-A ಗುರುತು ಮಾಡಿದ ಜಾಗದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಪತ್ತೆಯಾದ ತಲೆಬುರುಡೆ ಸಹಿತ ಅಸ್ಥಿಪಂಜರ 35-39 ವರ್ಷ ವಯಸ್ಸಿನ ಪುರುಷನದ್ದು ಎಂದು ಎಫ್ಎಸ್ಎಲ್ ವರದಿ ಎಸ್.ಐ.ಟಿ ಅಧಿಕಾರಿಗಳಿಗೆ ನೀಡಿದೆ.

ಇನ್ನೂ ಆರೋಪಿ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ತಲೆಬುರುಡೆ ಕೂಡ 40 ವರ್ಷದ ಪುರುಷನದ್ದು ಎಂದು ಎಫ್ಎಸ್ಎಲ್ ವರದಿಯಿಂದ ಬಹಿರಂಗವಾಗಿದೆ.

- Advertisement -

Latest News

error: Content is protected !!