Sunday, May 5, 2024
Homeತಾಜಾ ಸುದ್ದಿಓಮಿಕ್ರಾನ್ ಪ್ರಕರಣ ಹೆಚ್ಚಳ, ಡಿಸೆಂಬರ್ 28 ರಿಂದ ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ !

ಓಮಿಕ್ರಾನ್ ಪ್ರಕರಣ ಹೆಚ್ಚಳ, ಡಿಸೆಂಬರ್ 28 ರಿಂದ ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ !

spot_img
- Advertisement -
- Advertisement -

ಬೆಂಗಳೂರು: ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದ ಭೀತಿಯ ನಡುವೆ, ಡಿಸೆಂಬರ್ 28 ಮಂಗಳವಾರದಿಂದ ಮತ್ತೊಮ್ಮೆ ರಾತ್ರಿ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಡಿಸೆಂಬರ್ 28 ರಿಂದ ಪ್ರತಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕ್ಯೂಫ್ಯೂ ವಿಧಿಸಲಾಗುತ್ತದೆ.

ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಡಿಸೆಂಬರ್ 26 ರಂದು ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸಭೆಯ ನಂತರ ಆರೋಗ್ಯ ಸಚಿವ ಡಾ ಸುಧಾಕರ್ ಅವರು ರಾತ್ರಿ ಕರ್ಫ್ಯೂ ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದರು.

ನೈಟ್ ಕ್ಯೂಫ್ಯೂ ಹೊಸ ವರ್ಷಾಚರಣೆಗೆ ಮತ್ತಷ್ಟು ಕಡಿವಾಣ ಹಾಕುವ ಸಾಧ್ಯತೆ ಇದ್ದು, ಈಗಾಗಲೇ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ.

ಕರ್ನಾಟಕದಲ್ಲಿ ಶನಿವಾರ ಡಿಸೆಂಬರ್ 25 ರಂದು ಒಮಿಕ್ರಾನ್ ರೂಪಾಂತರದ ಏಳು ಹೊಸ ಪ್ರಕರಣಗಳು ವರದಿಯಾಗಿದ್ದು, ಇದುವರೆಗೆ ಒಟ್ಟು 38 ಕ್ಕೆ ಏರಿಕೆಯಾಗಿದೆ.

- Advertisement -
spot_img

Latest News

error: Content is protected !!