Friday, June 5, 2026
Homeಕರಾವಳಿಬಂಟ್ವಾಳ: ಸ್ನೇಹಿತೆ  ಚಿನ್ನಾಭರಣ ಪಡೆದು ಹಿಂದಿರುಗಿಸಿದೇ ವಂಚನೆ; ಮಹಿಳೆಯಿಂದ ದೂರು ದಾಖಲು

ಬಂಟ್ವಾಳ: ಸ್ನೇಹಿತೆ  ಚಿನ್ನಾಭರಣ ಪಡೆದು ಹಿಂದಿರುಗಿಸಿದೇ ವಂಚನೆ; ಮಹಿಳೆಯಿಂದ ದೂರು ದಾಖಲು

- Advertisement -
- Advertisement -

ಬಂಟ್ವಾಳ: ತನ್ನ ಸ್ನೇಹಿತೆ ನಿಶ್ಚಿತಾರ್ಥಕ್ಕೆಂದು ಚಿನ್ನಾಭರಣವನ್ನು ಪಡೆದು ಬಳಿಕ ಹಿಂದಿರುಗಿಸದೇ  ವಂಚಿಸಿದ್ದಾಳೆ ಎಂದು ಮಹಿಳೆಯೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳದ ಬಿ.ಮೂಡ ಗ್ರಾಮ ನಿವಾಸಿ ಸಂಧ್ಯಾ ದೂರು ನೀಡಿದ ಮಹಿಳೆ.

ನಾನು ಕಳೆದ ಏಪ್ರಿಲ್ ತಿಂಗಳಲ್ಲಿ  ವಿದೇಶಕ್ಕೆ ತೆರಳಲು ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ತನ್ನ ಸ್ನೇಹಿತೆ ಅಶ್ವಿನಿ ಎಂಬಾಕೆ ತನ್ನ ಮದುವೆಯಾಗುವ ಹುಡುಗ ಎಂದು ಶ್ರೀಕಾಂತ್ ಎಂಬಾನನನ್ನು ಪರಿಚಿಸಿದ್ದಾಳೆ. ಬಳಿಕ ತನ್ನ ನಿಶ್ಚಿತಾರ್ಥಕ್ಕೆಂದು ಚಿನ್ನಾಭರಣ ನೀಡುವಂತೆ ಕೇಳಿದ್ದಾಳೆ. ಆಗ ನಾನು ನನ್ನ ತಾಯಿಗೆ ಚಿನ್ನಾಭರಣಗಳನ್ನು ಕೊಡುವಂತೆ ತಿಳಿಸಿ ವಿದೇಶಕ್ಕೆ ತಾನು ತೆರಳಿದ್ದೆ. ಅದರಂತೆ  ತನ್ನ ತಾಯಿ ಆರೋಪಿ ಅಶ್ಚಿನಿಗೆ ಸುಮಾರು 32.70 ಗ್ರಾಂ ತೂಕದ ಚಿನ್ನದ ನಕ್ಲೇಸ್, ಸುಮಾರು 15.100 ಗ್ರಾಂ ತೂಕದ ಚಿನ್ನದ ಕೈ ಬಳೆ, ಸುಮಾರು 2.200 ಗ್ರಾಂ ತೂಕದ ವಜ್ರದ ಕಿವಿಯೊಲೆ ಜೊತೆ ಸುಮಾರು 17.200 ಗ್ರಾಂ ತೂಕದ ಚಿನ್ನದ ಕೈ ಬಳೆ , ಸುಮಾರು 8 ಗ್ರಾಂ ತೂಕದ ಚಿನ್ನದ ಬಳೆ, ಸುಮಾರು 8 ಗ್ರಾಂ ತೂಕದ ಚಿನ್ನದ ಪೆಂಡೆಂಟ್, ಸುಮಾರು 8 ಗ್ರಾಂ ತೂಕದ ಚಿನ್ನದ ರಿಂಗ್, 19 ಗ್ರಾಂ ತೂಕದ ಚಿನ್ನದ ಸರವನ್ನು ನೀಡಿದ್ದಾರೆ.

ಕೆಲ ಸಮಯದ ಬಳಿಕ, ಚಿನ್ನಾಭರಣಗಳನ್ನು ಹಿಂತಿರುಗಿಸುವಂತೆ, ಆರೋಪಿಗಳಾದ ಅಶ್ಚಿನಿ ಹಾಗೂ ಶ್ರೀಕಾಂತ್ ಎಂಬವರನ್ನು ಕೇಳಿಕೊಂಡಾಗಲೂ ಹಿಂತಿರುಗಿಸದಿದ್ದು, ಸತತ ಒತ್ತಡದ ಬಳಿಕ ಕೆಲವನ್ನು ಹಿಂದಿರುಗಿಸಿದ್ದಾರೆ. ಉಳಿದ ಚಿನ್ನಾಭರಣಗಳನ್ನು ಈವರೆಗೆ ಹಿಂತಿರುಗಿಸದೇ ವಂಚಿಸಿದ್ದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!