Monday, June 8, 2026
Homeಅಪರಾಧಬೆಳ್ತಂಗಡಿಯಲ್ಲಿ ಜಾಗದ ವಿಚಾರಕ್ಕೆ ತಕರಾರು; ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಜೀವ ಬೆದರಿಕೆ..!

ಬೆಳ್ತಂಗಡಿಯಲ್ಲಿ ಜಾಗದ ವಿಚಾರಕ್ಕೆ ತಕರಾರು; ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಜೀವ ಬೆದರಿಕೆ..!

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಶಿಬಾಜೆ ಗ್ರಾಮದಲ್ಲಿ ಮಹಿಳೆಯೊಂದಿಗೆ ಜಾಗದ ವಿಚಾರದಲ್ಲಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆ ನಡೆಸಿದ ಆರೋಪಿಗಳು 01 ಜಾರ್ಜ್, O1 ಕುರಿಯಾಕೋಸ್, ಪ್ರಮೋದ್ ಟಿಮ್ ಹಾಗೂ ಮ್ಯಾಥ್ಯ ಟಿಕೆ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಬೆಳ್ತಂಗಡಿ ಶಿಬಾಜೆ ಗ್ರಾಮದಲ್ಲಿ ಮೂವರು ಆರೋಪಿಗಳು ಮಹಿಳೆಯ ಗಂಡನ ಸ್ವಾಧೀನದಲ್ಲಿರುವ ಸರಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಖಾಸಗಿ ಸರ್ವೇಯವರ ಮೂಲಕ ಅಳತೆ ಮಾಡಲು ಬಂದಿದ್ದರು. ಇದನ್ನು ತಡೆಯಲು ಹೋದ ಮಹಿಳೆಗೆ ಹಾಗೂ ಆಕೆಯ ಸಹಾಯಕ್ಕೆ ಬಂದ ಇನ್ನೋರ್ವ ಮಹಿಳೆಯೊಂದಿಗೆ ಆರೋಪಿಗಳು ಅನುಚಿತವಾಗಿ ವರ್ತಿಸಿರುವುದಲ್ಲದೇ, ಕೈಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಹೋದ ಮಹಿಳೆಯ ಗಂಡನಿಗೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು  ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!