Sunday, June 7, 2026
Homeತಾಜಾ ಸುದ್ದಿಮಹಿಳೆಯರೇ ಕೂದಲು ಬಿಟ್ಟು ಕೆಲಸ ಮಾಡುವ ಮುನ್ನ ಎಚ್ಚರ..!; ಪೇಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯ...

ಮಹಿಳೆಯರೇ ಕೂದಲು ಬಿಟ್ಟು ಕೆಲಸ ಮಾಡುವ ಮುನ್ನ ಎಚ್ಚರ..!; ಪೇಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯ ದಾರುಣ ಸಾವು 

- Advertisement -
- Advertisement -

ಬೆಂಗಳೂರು: ನೆಲಗದರನಹಳ್ಳಿಯ ಶ್ರೀಪೇಂಟ್ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಮಿಕ್ಸರ್‌ಗೆ ಮಹಿಳೆಯೋರ್ವರ ಕೂದಲು ಸಿಲುಕಿ, ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶ್ವೇತಾ(33)ಮೃತಪಟ್ಟವರು. ಇವರು ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದು, ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಗೆ ಬಣ್ಣ ಬೆರೆಸುವ ಗೊಂಡರ್‌ನಲ್ಲಿ ಜಡೆ ಸಿಲುಕಿದ್ದು, ಇದರ ಪರಿಣಾಮ ಶ್ವೇತಾ ಅವರ ತಲೆ ಕತ್ತರಿಸಿ ಹೋಗಿದೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಬಣ್ಣ ಗಟ್ಟಿಯಾಗುತ್ತಿದ್ದರಿಂದ ಚೆಕ್ ಮಾಡಲು ಡ್ರೈಂಡರ್ ಒಳಗೆ ಬಗ್ಗಿದಾಗ ಮಹಿಳೆಯ ಜಡೆ ಸಿಲುಕಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಸಹ ಡ್ರೈಂಡರ್ ಸೌಂಡ್ ಗೆ ಯಾರಿಗೂ ಕೇಳಿಸಿಲ್ಲ.

ಇನ್ನು ಉಳಿದ ಕಾರ್ಮಿಕರು  ಡ್ರೈಂಡರ್‌ ಹತ್ತಿರ ಬರುವಾಗ ಮಹಿಳೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಡ್ರೈಂಡರ್ ಸ್ಪೀಡ್‌ಗೆ ಮಹಿಳೆಯ ತಲೆಯೇ ಕತ್ತರಿಸಿ ಹೋಗಿದೆ. ಈ ಬಗ್ಗೆ ಪ್ರಕರಣ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!