Sunday, June 28, 2026
Homeಇತರ'ನೀರಜ್' ಹೆಸರಿರುವ ಎಲ್ಲರಿಗೂ ಉಚಿತ ಪೆಟ್ರೋಲ್; ಚಿನ್ನದ ಹುಡುಗನಿಗೆ ಹೀಗೊಂದು ಗೌರವ ಸಲ್ಲಿಸಿದ ಪೆಟ್ರೋಲ್ ಬಂಕ್...

‘ನೀರಜ್’ ಹೆಸರಿರುವ ಎಲ್ಲರಿಗೂ ಉಚಿತ ಪೆಟ್ರೋಲ್; ಚಿನ್ನದ ಹುಡುಗನಿಗೆ ಹೀಗೊಂದು ಗೌರವ ಸಲ್ಲಿಸಿದ ಪೆಟ್ರೋಲ್ ಬಂಕ್ ಮಾಲೀಕ!

- Advertisement -
- Advertisement -

ಭರೂಚ್: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನ ಗೆದ್ದ ಖುಷಿಯಲ್ಲಿ ಗುಜರಾತ್‍ನ ಭರೂಚ್ ಎಂಬಲ್ಲಿನ ಪೆಟ್ರೋಲ್ ಬಂಕ್ ಮಾಲಕರೊಬ್ಬರು ನೀರಜ್ ಹೆಸರಿನ ಎಲ್ಲರಿಗೂ ರೂ. 501 ಬೆಲೆಯ ಪೆಟ್ರೋಲ್ ಅನ್ನು ಉಚಿತವಾಗಿ ಒದಗಿಸಿದ್ದಾರೆ.

ನೇತ್ರಾಂಗ್ ಪಟ್ಟಣದ ಎಸ್ಪಿ ಪೆಟ್ರೋಲಿಯಂ ಮಾಲೀಕರಾದ ಅಯೂಬ್ ಪಠಾಣ್ ಅವರೇ ಉಚಿತ ಪೆಟ್ರೋಲ್ ಘೋಷಿಸಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಮಾತನಾಡಿರವ ಅವರು, ಭರೂಚ್ ಪ್ರದೇಶದಲ್ಲಿರುವ ನೀರಜ್ ಹೆಸರಿನ ಎಲ್ಲರಿಗೂ ಉಚಿತವಾಗಿ 501 ರೂ. ಮೌಲ್ಯದ ಪೆಟ್ರೋಲ್ ನೀಡಲಾಗುವುದು. ನೀರಜ್ ಹೆಸರಿನವರು ತಮ್ಮ ಐಡಿ ಕಾರ್ಡ್ ತೋರಿಸುವ ಮೂಲಕ ಉಚಿತ ಪೆಟ್ರೋಲ್ ಪಡೆದುಕೊಳ್ಳಬಹುದು. ಸೋಮವಾರ ಸಂಜೆವರೆಗೆ ಈ ಆಫರ್ ನೀರಜ್ ಹೆಸರಿನವರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.

ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಹೀಗಾಗಿ ನಾವು ಉಚಿತ ಪೆಟ್ರೋಲ್ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ನೀರಜ್ ಹೆಸರಿನವರು ಎಷ್ಟು ಜನರು ಬೇಕಾದರೂ ನಮ್ಮ ಬಂಕ್ ಗೆ ಬಂದು ಉಚಿತ ಪೆಟ್ರೋಲ್ ಆಫರ್ ಪಡೆದುಕೊಳ್ಳಬಹುದು. ಬರುವಾಗ ನೀರಜ್ ಹೆಸರಿನ ಐಡಿ ಕಾರ್ಡ್ ತಂದರೆ ಸಾಕು ನಾವು 501 ರೂ. ಮೌಲ್ಯದ ಪೆಟ್ರೋಲ್ ಅನ್ನು ನೀಡುತ್ತೇವೆ ಅಂತಾ ಹೇಳಿದ್ದಾರೆ.ಇಲ್ಲಿಯವರೆಗೆ ಒಟ್ಟು 30 ಜನರು ಉಚಿತ ಪೆಟ್ರೋಲ್ ಪಡೆದುಕೊಂಡಿದ್ದಾರೆಂದು ಪೆಟ್ರೋಲ್ ಪಂಪ್ ಮಾಲೀಕರು ಹೇಳಿದ್ದಾರೆ

- Advertisement -

Latest News

error: Content is protected !!