Wednesday, May 8, 2024
Homeಕರಾವಳಿಉಡುಪಿತಿಂಗಳಾಂತ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ 4 ಆಕ್ಸಿಜನ್ ಪ್ಲಾಂಟ್: ಡಿಸಿ ಜಗದೀಶ್

ತಿಂಗಳಾಂತ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ 4 ಆಕ್ಸಿಜನ್ ಪ್ಲಾಂಟ್: ಡಿಸಿ ಜಗದೀಶ್

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಮುಂದುವರಿದಿದ್ದು ಪ್ರತಿದಿನ ನೂರರ ಆಸುಪಾಸಿನಲ್ಲಿ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಡಿಸಿ ಜಗದೀಶ್, ಮೂರನೇ ಅಲೆ ತಡೆಗಟ್ಟಲು ಸಿದ್ಧತೆ ಮಾಡಿಕೊಂಡಿದ್ದೇವೆ, ಜಿಲ್ಲೆಯಾದ್ಯಂತ ವಾತ್ಸಲ್ಯ ಮಕ್ಕಳ ತಪಾಸಣೆ ಕಾರ್ಯಕ್ರಮ ನಡೆಯುತ್ತಿದ್ದು, ಉಡುಪಿ ಜಿಲ್ಲೆಯ 2.40 ಸಾವಿರ ಮಕ್ಕಳ ತಪಾಸಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು ಹೊಸ ಆಕ್ಸಿಜನ್ ಪ್ಲಾಂಟ್ ತಿಂಗಳಾಂತ್ಯಕ್ಕೆ ಸಿದ್ದವಾಗುತ್ತದೆ ಎಂದು ತಿಳಿಸಿರುವ ಡಿಸಿ, ಪೀಡಿಯಾಟ್ರಿಕ್ ವೆಂಟಿಲೇಟರ್ ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಪೌಷ್ಠಿಕ ಮಕ್ಕಳಿಗೆ ಫುಡ್ ಕಿಟ್ ವಿತರಣೆಯಾಗುತ್ತಿದ್ದು,
ಮಕ್ಕಳ ತಜ್ಞರ ಸಭೆಯ ಜೊತೆಗೆ ಜಿಲ್ಲೆಯಲ್ಲಿ 50 ಐಸಿಯು ಬೆಡ್ ಹೆಚ್ಚಿಸಲು ನಿರ್ಮಿತಿ ಕೇಂದ್ರಕ್ಕೆ ಆದೇಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!