Friday, May 17, 2024
Homeಕರಾವಳಿಮಂಗಳೂರುಮಂಗಳೂರು: ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿ ವಂಚನೆ...!

ಮಂಗಳೂರು: ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿ ವಂಚನೆ…!

spot_img
- Advertisement -
- Advertisement -

ಮಂಗಳೂರು: ಹಲವು ಬ್ಯಾಂಕ್ ಗಳ ನಕಲಿ ಎಟಿಎಂ ಕಾರ್ಡ್ ಗಳನ್ನು ಬಳಸಿ 1,88,800 ರೂ. ತೆಗೆದು ವಂಚಿಸಿರುವ ಘಟನೆ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೋರ್ವ ನಕಲಿ ಎಟಿಎಂ ಕಾರ್ಡ್ ಬಳಸಿ ಕಾರ್ ಸ್ಟ್ರೀಟ್ ನಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಎಟಿಎಂನಿಂದ ಅ.24 ರಂದು ಬೆಳಗ್ಗೆ 4.40 ಕ್ಕೆ 27,000ರೂ. ಅದೇ ದಿನ ಬೆಳಗ್ಗೆ 11 ಕ್ಕೆ 9,800 ಹಾಗು ರೂ. 30,000 ರೂ ಮರುದಿನ 20,000ರೂ ವಿದ್ ಡ್ರಾ ಮಾಡಿದ್ದಾನೆ.

ಇನ್ನು ನ.20 ಬೆಳಗ್ಗೆ 5 ಗಂಟೆಗೆ ಮತ್ತೆ ನಕಲಿ ಎಟಿಎಂ ಕಾರ್ಡ್ ಬಳಸಿ 1.02 ಲಕ್ಷ ರೂ ಹಣ ವಿದ್ ಡ್ರಾ ಮಾಡಿದ್ದಾನೆ. ಆಗ ಬ್ಯಾಂಕ್ ನ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದು ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾರೆ. ಈ ಬಗ್ಗೆ ವಿಶ್ವಕರ್ಮ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!