Saturday, June 6, 2026
Homeಅಪರಾಧಬಹ್ಮಾವರ ಮಹಿಳೆ ಕೊಲೆ ಪ್ರಕರಣ ತನಿಖೆಗೆ ನಾಲ್ಕು ತಂಡ ರಚನೆ

ಬಹ್ಮಾವರ ಮಹಿಳೆ ಕೊಲೆ ಪ್ರಕರಣ ತನಿಖೆಗೆ ನಾಲ್ಕು ತಂಡ ರಚನೆ

- Advertisement -
- Advertisement -

ಉಡುಪಿ: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತನಿಖಾ ತಂಡಗಳನ್ನು ರಚಿಸಲಾಗಿದೆ. ಆರೋಪಿ ಪತ್ತೆಗೆ ನಾಲ್ಕು ತಂಡಗಳನ್ನು ಎಸ್ಪಿ ರಚಿಸಿದ್ದು, ಉಡುಪಿ, ಮಣಿಪಾಲ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳ ಒಟ್ಟು ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಶೀಘ್ರ ಆರೋಪಿಯನ್ನು ಬಂಧನ ಮಾಡುತ್ತೇವೆ ಎಂದು‌ ಉಡುಪಿ ಎಸ್ ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಬ್ರಹ್ಮಾವರದಲ್ಲಿ ನಡೆದಿದ್ದ ಒಂಟಿ ಮಹಿಳೆ ಕೊಲೆ ತೀವ್ರ ಆತಂಕ ಹುಟ್ಟು ಹಾಕಿತ್ತು.‌ ಮೃತ ವಿಶಾಲ ಗಾಣಿಗ ಅವರ ಕುತ್ತಿಗೆ ಬಿಗಿದು ಕೊಲೆ ನಡೆಸಿದ ದುಷ್ಕರ್ಮಿ, ಚಿನ್ನದ ಬಳೆ ಕರಿಮಣಿ ಸರ, ಕಿವಿಯೋಲೆ ಕದ್ದು ಪರಾರಿಯಾಗಿದ್ದಾನೆ. ಜೊತೆಗೆ ಬ್ಯಾಂಕಿನಿಂದ ತಂದಿದ್ದ ನಗದು ಜೊತೆ ಕೂಡಾ ಆರೋಪಿ ಪರಾರಿಯಾಗಿದ್ದಾನೆ.‌ ತನಿಖೆ ಚುರುಕುಗೊಳಿಸಿರುವ ಪೊಲೀಸರು ಕೊಲೆ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!