Monday, June 8, 2026
Homeಕರಾವಳಿಮಳೆಯಿಂದ ಅಪಾಯದಲ್ಲಿ ಸಿಲುಕಿದ್ದ ನಾಲ್ಕು ತಿಂಗಳ ಮಗು ರಕ್ಷಣೆ

ಮಳೆಯಿಂದ ಅಪಾಯದಲ್ಲಿ ಸಿಲುಕಿದ್ದ ನಾಲ್ಕು ತಿಂಗಳ ಮಗು ರಕ್ಷಣೆ

- Advertisement -
- Advertisement -

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಕ್ಕೇರಿದ ಹಳ್ಳದ ನೀರಿನಿಂದ ಮನೆಗಳು ಜಲಾವೃತಗೊಂಡಿವೆ.‌ 4 ತಿಂಗಳ ಮಗು ಸೇರಿದಂತೆ ಅಪಾಯದಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಎನ್ ಆರ್ ಪುರ ತಾಲೂಕಿನ ಶೆಟ್ಟಿ ಕೊಪ್ಪದಲ್ಲಿ ಘಟನೆ ನಡೆದಿದ್ದು, ಪೊಲೀಸ್ ಮತ್ತ ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.‌ ಬೆಳಗ್ಗೆಯಿಂದಲೂ ಹಳ್ಳದ ನೀರು ಆವರಿಸಿ ಜನರು ಪರದಾಡುವಂತಾಗಿತ್ತು.

ಇನ್ನು ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಬೈದುವಳ್ಳಿ, ಗೌಡಹಳ್ಳಿ ಸೇತುವೆ ಮುಳುಗಡೆಯಾಗಿದೆ.‌ ಗ್ರಾಮಗಳು ದ್ವೀಪದಂತಾಗಿದ್ದು ಸಂಪರ್ಕ ಕಡಿತಗೊಂಡಿದೆ.

ಮಳೆ ನೀರು ನುಗ್ಗಿ ಕಾಫಿ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು,‌ಮುಳುಗಡೆಯಾಗಿರುವ ಸೇತುವೆ ದಾಟಲು ಜನರು ಹರಸಾಹಸ ಪಡುವಂತಾಗಿದೆ.‌

- Advertisement -

Latest News

error: Content is protected !!