Thursday, June 4, 2026
Homeಕರಾವಳಿಮಂಗಳೂರುಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ...

ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದು ಬಂಧಿತರಿಂದ 50 ಲಕ್ಷ ಮೌಲ್ಯದ  ಸುಮಾರು 517.76  ಗ್ರಾಂ  ಎಂ.ಡಿ.ಎಂ.ಎ. ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸರು.

 ಮೊಹಮ್ಮದ್ ಶಿಯಾಬ್ @ ಶಿಯಾಬ್ , ನಾವುಂದ  ಗ್ರಾಮದ, ಕುಂದಾಪುರ, ಬೈಂದೂರು ತಾಲೂಕು ,  ಮೊಹಮ್ಮದ್ ನೌಷದ್  @  ನೌಷದ್ , ನರಿಂಗಾನ ಗ್ರಾಮ, ಉಳ್ಳಾಲ ತಾಲೂಕು,  ಇಮ್ರಾನ್ @ ಇಂಬ, ಕಸಬಾ ಬೆಂಗ್ರೆ, ಮಂಗಳೂರ,  ನಿಸಾರ್ ಅಹಮ್ಮದ್ @ ನಿಸಾರ್, ಬ್ರಹ್ಮರ ಕೊಟ್ಲು ಬಂಟ್ವಾಳ ತಾಲೂಕು ಬಂಧಿತ ಆರೋಪಿಗಳು.

ಪ್ರಕರಣದ ವಿವರ;

ಮಂಗಳೂರು ನಗರದ  ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್  ರವರ ನೇತೃತ್ವದಲ್ಲಿ   ಸಿ.ಸಿ.ಬಿ.ಯ  ತಂಡವು ಖಚಿತ ಮಾಹಿತಿ ಸಂಗ್ರಹಿಸಿ ದಿನಾಂಕ:06-12-2025  ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವಿನ್ಷನ್ ಹಾಲ್ ಬಳಿ ಒಂದು ಕಾರಿನಲ್ಲಿ ಮಾದಕ ವಸ್ತುವನ್ನು  ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ದಾಳಿ ನಡೆಸಿ ಎಂಬ ನಾಲ್ಕು ಜನರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಸುಮಾರು 50 ಲಕ್ಷ ಮೌಲ್ಯದ ಸುಮಾರು 517.76  ಗ್ರಾಂ  ಎಂ.ಡಿ.ಎಂ.ಎ. ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ನೀಲಿ ಬಣ್ಣದ ಮಾರುತಿ ಕಂಪನಿಯ FRONX ಮಾದರಿಯ ಕೆಎ-70-ಎಮ್ -7115 ಕಾರು, ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ರಿ ಮಾದಕ ವಸ್ತುವನ್ನು ಆರೋಪಿತರು ಬೆಂಗಳೂರಿನಲ್ಲಿ ಒಬ್ಬ ನೈಜೀರಿಯಾ ದೇಶದ ವ್ಯಕ್ತಿಯಿಂದ ತಂದು  ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ  ತಿಳಿದು ಬಂದಿರುತ್ತದೆ. ಸದ್ರಿ ಆರೋಪಿತರ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:124/2025 ಕಲಂ:22(ಸಿ) , 21(C) ಎನ್.ಡಿ.ಪಿ.ಎಸ್. ಕಾಯ್ದೆ ಜೊತೆಗೆ 3(5) ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!