Saturday, April 13, 2024
Homeಕರಾವಳಿದ.ಕ. ಜಿಲ್ಲೆಯ ಎರಡು ರಾ.ಹೆ. ಕಾಮಗಾರಿಗಳಿಗೆ ಇಂದು ನಿತಿನ್ ಗಡ್ಕರಿ ಶಿಲಾನ್ಯಾಸ

ದ.ಕ. ಜಿಲ್ಲೆಯ ಎರಡು ರಾ.ಹೆ. ಕಾಮಗಾರಿಗಳಿಗೆ ಇಂದು ನಿತಿನ್ ಗಡ್ಕರಿ ಶಿಲಾನ್ಯಾಸ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಹೆದ್ದಾರಿ ಕಾಮಗಾರಿಗಳಿಗೆ ಇಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ಮಾಡಲಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿವರೆಗಿನ ಸುಮಾರು 28.50 ಕಿ.ಮೀ. ಉದ್ದದ ದ್ವಿಪಥ ರಸ್ತೆ ಅಗಲೀಕರಣ ಪೇವ್ಡ್ ಶೋಲ್ಡರ್ ಸಹಿತ ಕಾಮಗಾರಿ ಸುಮಾರು ಅಂದಾಜು ವೆಚ್ಚ 614 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ.

ಇದೇ ವೇಳೆ ಇನ್ನೊಂದು ಕಾಮಗಾರಿ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸುಮಾರು 11 ಕಿ.ಮೀ. ದ್ವಿಪಥ ರಸ್ತೆ ಅಗಲೀಕರಣ ಪೇವ್ಡ್ ಶೋಲ್ಡರ್ ಸಹಿತ‌ ಸುಮಾರು ಅಂದಾಜು ವೆಚ್ಚ 344 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಈ ಎರಡೂ ಕಾಮಗಾರಿಗಳ ಸಹಿತ ಸುಮಾರು 6200 ಕೋಟಿ ರೂಪಾಯಿ ವೆಚ್ಚದ ವಿವಿಧ ಹೆದ್ದಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಇಂದು ಶಿವಮೊಗ್ಗದಿಂದ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿಗಳ ಇಲಾಖೆ ಸಚಿವ ನಿತಿನ್ ಗಡ್ಕರಿ ನೆರವೇರಿಸಲಿದ್ದಾರೆ.

- Advertisement -
spot_img

Latest News

error: Content is protected !!