- Advertisement -
- Advertisement -
ಮಂಗಳೂರು: ತಿರುವನಂತಪುರ – ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರಿನವರೆಗೆ ವಿಸ್ತರಣೆಯಾಗಿದೆ.
ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಡಲಿರುವ ರೈಲು ಮಧ್ಯಾಹ್ನ 3.05ಕ್ಕೆ ತಿರುವನಂತಪುರವನ್ನು ತಲುಪಲಿದೆ. ಸಂಜೆ 4.05ಕ್ಕೆ ತಿರುವನಂತಪುರದಿಂದ ವಾಪಸ್ ಹೊರಡಲಿರುವ ರೈಲು ಮಂಗಳೂರಿಗೆ ರಾತ್ರಿ 12.40ಕ್ಕೆ ತಲುಪಲಿದೆ.
ಬುಧವಾರ ಹೊರತು ಪಡಿಸಿ ಉಳಿದಂತೆ ವಾರದ ಆರು ದಿನಗಳ ಕಾಲ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ.
ಮಂಗಳೂರಿನವರೆಗೆ ವಂದೇ ಭಾರತ್ ರೈಲು ವಿಸ್ತರಣೆಗೆ ಬಹಳ ಕಾಲದಿಂದ ಒತ್ತಾಯ ವ್ಯಕ್ತವಾಗಿತ್ತಲ್ಲದೇ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕೂಡಾ ಮನವಿ ಮಾಡಿದ್ದರು.
- Advertisement -