Sunday, May 5, 2024
Homeಕರಾವಳಿಮಂಗಳೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕ್ಲಸ್ಟರ್ ಮಾದರಿ ವಸತಿಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಂಗಳೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕ್ಲಸ್ಟರ್ ಮಾದರಿ ವಸತಿಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಾಗಿ ಕ್ಲಸ್ಟರ್ ಮಾದರಿಯ ವಸತಿಗೃಹ ನಿರ್ಮಿಸಲಾಗುತ್ತಿದೆ.

50 ಕ್ಕೂ ಹೆಚ್ಚು ವಸತಿಗೃಹಗಳ ‌ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಂಗಳೂರು ನಗರದ ಪಡೀಲ್ ಅರಣ್ಯ ಸಸ್ಯಪಾಲನಾಲಯ ಆವರಣದಲ್ಲಿ ಪ್ರಸ್ತುತವಿರುವ ಹಳೆಯ ನಿರುಪಯುಕ್ತ ವಸತಿಗೃಹಗಳನ್ನು ತೆರವುಗೊಳಿಸಿ 50ಕ್ಕೂ ಹೆಚ್ಚಿನ ವಸತಿಗೃಹಗಳು ನಿರ್ಮಿಸಲಾಗುತ್ತಿದೆ.

ಮಂಗಳೂರು ನಗರದಲ್ಲಿರುವ ವೃತ್ತ ಕಚೇರಿ, ವಿಭಾಗ ಕಚೇರಿ, ವಲಯ ಕಚೇರಿ ಹಾಗೂ ಅರಣ್ಯ ಸಂಚಾರಿ ದಳ, ಸಾಮಾಜಿಕ ಅರಣ್ಯ ವಿಭಾಗಕ್ಕೆ ಸೇರಿದ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗಾಗಿ ಕ್ಲಸ್ಟರ್ ಮಾದರಿಯ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಎನ್ನುವಂತೆ ಹೊಸ ಗುಣಮಟ್ಟದ ಉನ್ನತ ದರ್ಜೆಯ ಕ್ಲಸ್ಟರ್ ಮಾದರಿಯ ವಸತಿ ಗೃಹಗಳನ್ನು ಅರಣ್ಯ ಇಲಾಖೆಯ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಿರ್ಮಿಸಲಾಗುತ್ತಿದೆ.

ಒಂದು ವರ್ಷದ ಅವಧಿಯೊಳಗೆ ವಸತಿಗೃಹಗಳನ್ನು ವಾಸಕ್ಕೆ ಮುಕ್ತಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!