Saturday, June 13, 2026
Homeಕ್ರೀಡೆಸೂಪರ್ ಕಾರ್ ರೇಸರ್ ರೇನಿ ಗ್ರೇಸೀ ಈಗ ಫೇಮಸ್ ನೀಲಿ ಚಿತ್ರತಾರೆ!

ಸೂಪರ್ ಕಾರ್ ರೇಸರ್ ರೇನಿ ಗ್ರೇಸೀ ಈಗ ಫೇಮಸ್ ನೀಲಿ ಚಿತ್ರತಾರೆ!

- Advertisement -
- Advertisement -

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಮೊಟ್ಟ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ರೇಸರ್ ಎಂದು ಗುರುತಿಸಿಕೊಂಡಿದ್ದ ರೆನೀ ಗ್ರೇಸಿ, ಕಾರು ರೇಸಿಂಗ್ ತ್ಯಜಿಸಿ ನೀಲಿ ಚಿತ್ರ ತಾರೆಯಾಗಿ ಬದಲಾಗಿದ್ದಾರೆ.

ಹಣದ ಸಮಸ್ಯೆಯಿಂದಾಗಿ ರೇನಿ ಗ್ರೇಸಿ ನೀಲಿ ಚಿತ್ರತಾರೆಯಾಗಿ ಬದಲಾಗಿದ್ದಾರೆ. ರೇಸಿಂಗ್ ನಲ್ಲಿ ತನ್ನ ಭವಿಷ್ಠ ರೂಪಿಸಿಕೊಳ್ಳಬೇಕು ಎಂಬ ಮಹದಾಸೆಗೆ ಹಣದ ಸಮಸ್ಯೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು. ಆರಂಭಗಲ್ಲಿ ರೇಸಿಂಗ್ ನಲ್ಲಿ ಗ್ರೇಸಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರೇನೀ ಗ್ರೇಸಿ ರೇಸಿಂಗ್ ಬಿಟ್ಟು ಸ್ಥಳೀಯ ಕಾರ್ ಯಾರ್ಡ್‍ನಲ್ಲಿ ಕೆಲಸ ಮಾಡ ತೊಡಗಿದರು. ಇದರಿಂದಲೂ ಗ್ರೇಸಿಗೆ ಹೇಳಿಕೊಳ್ಳುವಂತಹ ಆದಾಯ ಬರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ರೇನೀ ಗ್ರೇಸಿ ನೀಲಿ ಚಿತ್ರಗಳ ವೆಬ್ ಸೈಟ್ ತೆರೆದು ತಮ್ಮದೇ ವಿಡಿಯೋ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

ಕಳೆದ 14 ವರ್ಷಗಳಲ್ಲಿ ಗ್ರೇಸಿ ಅವರು ಆಸ್ಟ್ರೇಲಿಯಾದ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ಡ್ರೈವರ್ ಆಗಿ ಗುರುತಿಸಿಕೊಂಡಿದ್ದ ರೇನಿ ಗ್ರೇಸಿ, ಆಸ್ಟ್ರೇಲಿಯಾದ ಪ್ರಸಿದ್ಧ 1000 ಸೂಪರ್‍ಕಾರ್ ರೇಸ್‍ನಲ್ಲಿ ಭಾಗವಹಿಸಲು 2015ರಲ್ಲಿ ಸಿಮೋನಾ ಡಿ ಸಿಲ್ವೆಸ್ಟ್ರೊ ಜೊತೆಗೂಡಿದ್ದರು. 1998ರಿಂದ ಬಹುತೇಕ ರೇಸ್‍ಗಳಲ್ಲಿ ಗ್ರೇಸಿ ಹಾಗೂ ಸಿಮೋನಾ ಜೊತೆಯಾಗಿಯೇ ರೇಸ್‍ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಉತ್ತಮ ಮಹಿಳಾ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಗಿತ್ತು.

ಮೊದಲೇ ಆಸ್ಟ್ರೇಲಿಯಾದ ಸೂಪರ್ ಕಾರ್ ರೇಸರ್ ಎಂದು ಖ್ಯಾತಿ ಗಳಿಸಿದ್ದ ರೇನಿ ಗ್ರೇಸಿ ಇದೀಗ ಪೋರ್ನ್ ಇಂಡಸ್ಚ್ರಿಗೆ ಕಾಲಿಟ್ಟ ವಿಚಾರ ಆಸ್ಟ್ರೇಲಿಯಾದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ರೇನಿ ಗ್ರೇಸಿ ಅವರ ನೀಲಿ ಚಿತ್ರಗಳ ವೆಬ್ ಸೈಟ್ ಗೆ ಕೇವಲ ಒಂದು ವಾರದಲ್ಲೇ ಸುಮಾರು 7 ಸಾವಿರ ಜನ ಚಂದಾದಾರರಾಗಿದ್ದು, ಒಂದೇ ವಾರದಲ್ಲಿ ರೇನೀ ಗ್ರೇಸಿ ಸುಮಾರು 2.26 ಲಕ್ಷ ರೂ.(3,000 ಡಾಲರ್)ಸಂಪಾದಿಸಿದ್ದಾರೆ.

- Advertisement -

Latest News

error: Content is protected !!