Friday, June 5, 2026
Homeಇತರವಿಡಿಯೋ ಕಾಲ್ ಅವಾಂತರ: ಪತ್ನಿಯ ಯೋಗ ವಿಡಿಯೋದಲ್ಲಿ ಬೆತ್ತಲಾಗಿ ಕಂಡ ಟಿವಿ ಪತ್ರಕರ್ತ

ವಿಡಿಯೋ ಕಾಲ್ ಅವಾಂತರ: ಪತ್ನಿಯ ಯೋಗ ವಿಡಿಯೋದಲ್ಲಿ ಬೆತ್ತಲಾಗಿ ಕಂಡ ಟಿವಿ ಪತ್ರಕರ್ತ

- Advertisement -
- Advertisement -

ಸೌತ್​ ಹ್ಯಾಂಪ್ಟನ್​: ಲಾಕ್​ಡೌನ್​ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಯೋಗ ಕಲಿಸಲು ಮಂದಾದ ಸೆಲೆಬ್ರಿಟಿ ಪತ್ನಿಯೇ ಪತಿಯ ‘ಮಾನ’ ಹರಾಜಾಗಲು ಕಾರಣವಾಗಿದ್ದಾಳೆ.

ತನ್ನ ಪತ್ನಿ ಭಾಗಿಯಾಗಿದ್ದ ಯೋಗ ಸೆಶನ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದು, ಅದರಲ್ಲಿ ಅಕಸ್ಮಾತ್‌ ಆಗಿ ಸೆರೆಯಾಗಿರುವ CNN ಸುದ್ದಿ ನಿರೂಪಕ ಕ್ರಿಸ್ ಕುಮೋ ಬೆತ್ತಲಾಗಿ ಕಂಡಿದ್ದಾರೆ.

ಈ ವಿಡಿಯೋವನ್ನು ಕ್ರಿಸ್ಟಿನಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮೇ 27ರಂದು ಸೆರೆಹಿಡಿಯಲಾದ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಲಾಯಿತಾದರೂ, ಅದಾಗಲೇ ಸಾಕಷ್ಟು ಮಂದಿ ಅದರ ಸ್ಕ್ರೀನ್ ಶಾಟ್ ಹಿಡಿದುಕೊಂಡಿದ್ದರು.

ಕೋವಿಡ್-19 ಇರುವ ಕಾರಣ ಮನೆಯಿಂದಲೇ ಕೆಲಸ ಮಾಡಿಕೊಂಡು, ಅಲ್ಲೇ ಇರಬೇಕಾದ ಪರಿಸ್ಥಿತಿಯಲ್ಲಿ ಕ್ರಿಸ್‌ ಕೊಮೋ ಯೋಗ ಸೆಶನ್‌ ಅನ್ನೂ ಸಹ ಆನ್ಲೈನ್‌ನಲ್ಲಿ ಅಟೆಂಡ್ ಮಾಡಬೇಕಾಗಿ ಬಂದಿದ್ದಾಗ ಈ ರೀತಿ ಆಗಿದೆ.

- Advertisement -

Latest News

error: Content is protected !!