Saturday, May 18, 2024
Homeಕರಾವಳಿಮಂಗಳೂರು: ಸಮುದ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿದೇಶಿ ಹಡಗು ಶೇ. 70ರಷ್ಟು ಹಡಗು ಮುಳುಗಡೆ

ಮಂಗಳೂರು: ಸಮುದ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿದೇಶಿ ಹಡಗು ಶೇ. 70ರಷ್ಟು ಹಡಗು ಮುಳುಗಡೆ

spot_img
- Advertisement -
- Advertisement -

ಮಂಗಳೂರು:  ಉಳ್ಳಾಲ ಕಡಲಿನಲ್ಲಿ ತಳಸ್ಪರ್ಶಗೊಂಡು ನಿಂತಿರುವ ಸಿರಿಯಾದ ಪ್ರಿನ್ಸೆಸ್‌ ಮಿರಾಲ್‌ ಸರಕು ಸಾಗಾಟದ ಹಡಗು ಶೇ. 70ರಷ್ಟು ಮುಳುಗಿದೆ. ಸಮುದ್ರದ ಅಬ್ಬರ ನೋಡಿದರೆ ಹಡಗು ಪೂರ್ಣ ಜಲಸಮಾಧಿಯಾಗುವ ಭೀತಿಯಿದೆ ಎನ್ನಲಾಗಿದೆ.

ಮಲೇಷ್ಯಾದಿಂದ ಲೆಬನಾನ್‌ಗೆ ಉಕ್ಕಿನ ಕಾಯಿಲ್‌ಗ‌ಳನ್ನು ಸಾಗಿಸುತ್ತಿದ್ದ ಹಡಗು ತಾಂತ್ರಿಕ ದೋಷ ಹಾಗೂ ಹಡಗಿನ ಮುಂಭಾಗದಲ್ಲಿ ರಂಧ್ರ ಉಂಟಾಗಿ ಅಪಾಯಕ್ಕೆ ಸಿಲುಕಿತ್ತು. ದುರಸ್ತಿಗಾಗಿ ನವಮಂಗಳೂರು ಬಂದರಿನ ಆಯಂಕರೇಜ್‌ ಹಾಗೂ ಮಂಗಳೂರು ಹಳೇಬಂದರಿಗೆ ಈ ಹಡಗನ್ನು ತರಲು ಹಡಗಿನ ಏಜೆಂಟರು ಯತ್ನಿಸಿದ್ದರೂ ಅನುಮತಿ ಸಿಕ್ಕಿರಲಿಲ್ಲ. ಈ ನಡುವೆ ಉಚ್ಚಿಲ ಬಳಿ ಹಡಗು ತಳಸ್ಪರ್ಶಗೊಂಡು ನಿಂತಿತು. ಅದರಲ್ಲಿದ್ದ 15 ಮಂದಿ ಸಿರಿಯನ್‌ ನಾವಿಕರನ್ನು ಕೋಸ್ಟ್‌ಗಾರ್ಡ್‌ ತಂಡ ರಕ್ಷಣೆ ಮಾಡಿತ್ತು.

ಸದ್ಯ ಸಮುದ್ರದಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ ಪ್ರಿನ್ಸಸ್‌ ಮಿರಾಲ್‌ ಕಾರ್ಗೋ ನೌಕೆಯನ್ನು ತೆರವುಗೊಳಿಸುವ ಬಗ್ಗೆ ಹಡಗಿನ ಏಜೆನ್ಸಿ ಚಿಂತನೆ ನಡೆಸುತ್ತಿದೆ. ಹಡಗಿನ ಮಾಲಕರು ಟರ್ಕಿ ಮೂಲದವರಾಗಿದ್ದು ಮಂಗಳೂರಿನಲ್ಲಿ ಅದರ ಪ್ರತಿನಿಧಿ ಮಾರ್ಕಾನ್‌ ಶಿಪ್ಪಿಂಗ್‌ ಏಜೆನ್ಸಿ. ಏಜೆನ್ಸಿಯ ಪ್ರತಿನಿಧಿ ಮಂಗಳೂರಲ್ಲಿ ಇದ್ದು, ಬಂದರು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಮುಂಬಯಿಯ ಸ್ಮಿತ್‌ ಸಾಲ್ವೆಜ್‌ ಕಂಪೆನಿಯ ತಜ್ಞರು ಮಂಗಳೂರಿಗೆ ಆಗಮಿಸಿ ಹಡಗಿನ ಬಳಿ ತೆರಳಿ ಪರಿಶೀಲನೆ ನಡೆಸಬೇಕಿದೆ. ಹಡಗಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 8,000 ಟನ್‌ ಸ್ಟೀಲ್‌ ಕಾಯಿಲ್‌ ಇದ್ದು ಅದನ್ನು ಪಡೆಯುವುದಕ್ಕಾದರೂ ಮಾಲಕರು ಹಡಗು ತೆರವು ಮಾಡಲು ಮುಂದಾಗಬಹುದು ಎಂದು ಅಂದಾಜಿಸಲಾಗಿದೆ.

- Advertisement -
spot_img

Latest News

error: Content is protected !!