Saturday, May 18, 2024
Homeತಾಜಾ ಸುದ್ದಿಮರಿ ಆನೆಯನ್ನು ಮತ್ತೆ ತನ್ನ ಕುಟುಂಬದ ಜೊತೆಗೆ ಸೇರಿಸಿದ ಅರಣ್ಯ ಇಲಾಖೆ; ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ...

ಮರಿ ಆನೆಯನ್ನು ಮತ್ತೆ ತನ್ನ ಕುಟುಂಬದ ಜೊತೆಗೆ ಸೇರಿಸಿದ ಅರಣ್ಯ ಇಲಾಖೆ; ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಮೆಚ್ಚುಗೆ!

spot_img
- Advertisement -
- Advertisement -

ತಮಿಳುನಾಡು: ತನ್ನ ತಾಯಿಯಿಂದ ಬೇರ್ಪಟ್ಟ ಮರಿ ಆನೆಯೊಂದನ್ನು ಅರಣ್ಯ ಇಲಾಖೆಯವರು ಅದರ ಕುಟುಂಬದ ಜೊತೆಗೆ ಸೇರಿಸಿದ ಕಾರ್ಯಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ತಮಿಳುನಾಡು ರಾಜ್ಯದ ನೀಲಗಿರಿ ಪರ್ವತಗಳಲ್ಲಿರುವ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮರಿ ಆನೆಯನ್ನು ರಕ್ಷಿಸಿ ಆನೆಯ ಕುಟುಂಬವನ್ನು ಹುಡುಕಲು ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿರುವ ಭಾರೀ ಹರಿದಾಡುತ್ತಿದೆ.

ತಮಿಳುನಾಡು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಅರಣ್ಯ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ ಟ್ವಿಟ್ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಮರಿ ಆನೆಯ ಮೇಲೆ ಪ್ರೀತಿಯ ಸುರಿಮಳೆಯನ್ನೇ ಬೀರಿದ್ದಾರೆ ಎಂದು ಸುಪ್ರಿಯಾ ಸಾಹು ನೆನೆಸಿಕೊಂಡಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಮರಿ ಆನೆಯು ಎತ್ತರದ ದಿಬ್ಬಗಳಲ್ಲಿ ನಿಂತು ತನ್ನ ತಾಯಿಯನ್ನು ಗುರುತಿಸಿ ಸಂತೋಷದಿಂದ ಜೋರಾಗಿ ಘೀಳಿಡುವ ಪರಿಯನ್ನು ವಿಡಿಯೋದಲ್ಲಿ ನೋಡಬಹುದು.

ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ ಸಚಿನ್, ವೆಂಕಟೇಶ್ ಪ್ರಭು, ಪ್ರಸಾದ್, ವಿಜಯ್, ಪ್ರವೀಣ್, ತಂಬ ಕುಮಾರ್, ಅನೀಶ್ ಕುಮಾರ್ ಮತ್ತು ಪಂಡಲೂರ್ ಎಂದು ಐಎಎಸ್ ಅಧಿಕಾರಿ ಮಾಹಿತಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!